ಮೈಸೂರು: ಮೈಸೂರಿನ ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿರುವುದೇ ಟಿಪ್ಪು ಸುಲ್ತಾನ್ʼಎಂಬ ಹೇಳಿಕೆಯನ್ನು ನೀಡಿರುವ ಸಮಾಜ ಕಲ್ಯಾಣ ಸಚಿವ ಡಾ.ಸಿ. ಮಹದೇವಪ್ಪನವರ ವಿರುದ್ದ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ತಿರುಗೇಟನ್ನು ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಇಂದು ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು “ಜೂನಿಯರ್ ಡಾಕ್ಟರ್ ಯತೀಂದ್ರರವರು ನಾಲ್ವಡಿ ಮಹಾರಾಜರಿಗಿಂತಲೂ ನಮ್ಮಪ್ಪನೇ ದೊಡ್ಡವರೆಂಬ ಹೇಳಿಕೆಯನ್ನುನೀಡುವುದರ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಲು ಹೊರಟರೆ, ಅದೇ ರೀತಿ ಸೀನಿಯರ್ ಡಾಕ್ಟರ್ ಡಾ.ಸಿ.ಮಹದೇವಪ್ಪನವರು ಇತಿಹಾಸವನ್ನೇ ತಿರುಚಲು ಯತ್ನಿಸುತ್ತಿದ್ದಾರೆಂದು ಕಿಡಿಕಾರಿದ್ದಾರೆ.
ಇತಿಹಾಸದಲ್ಲಿ ನಡೆರದಿರುವಂತಹ ಸಾಧನೆಗಳನ್ನು ಗುರುತಿಸಿ ಅದಕ್ಕೆ ಕೊಂಕು ತೆಗೆದು ಇತಿಹಾಸವನ್ನು ತಿರುಚುವ ಕೆಲಸ ನಡೆಯುತ್ತಿರುವುದು ಕಾಂಗ್ರೆಸ್ಸಿಗರಿಂದ ಇದೇ ಮೊದಲಲ್ಲ ಎಂದು ಟೀಕಿಸಿದ್ದಾರೆ.
ʼಟಿಪ್ಪುವಿನ ಆಳ್ವಿಕೆಯ ಕಾಲದಲ್ಲಿ ವಿಶ್ವೇಶ್ವರಯ್ಯ ಹುಟ್ಟಿರಲಿಲ್ಲ.ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯ ಇರದಿದ್ದರೆ ಕೆ.ಆರ್.ಎಸ್ ನಿರ್ಮಾಣವಾಗುತ್ತಿರಲಿಲ್ಲ.1799ರಲ್ಲಿ ಟಿಪ್ಪು ಸತ್ತುಹೋದ.1911ರಲ್ಲಿ ಕೆ.ಆರ್ಸ್ ನಿರ್ಮಾಣ ಪ್ರಾರಂಭಿಸಿದರು. ನೀವು ಹೇಳುವ ಲಾಜಿಕ್ ಯತ್ತಣಿಂದೆತ್ತ ಸಂಬಂಧವಯ್ಯಾ ಮಹದೇವಪ್ಪ ಎಂದು ಪ್ರಶ್ನೆ ಮಾಡಿದ್ದಾರೆ.
