ಬೆಂಗಳೂರು : ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ರವರ ನೇತೃತ್ವದ ಏಕಸದಸ್ಯ ಆಯೋಗವು ಒಳಮೀಸಲಾತಿ ಸಮೀಕ್ಷಾ ವರದಿಯನ್ನ ರಾಜ್ಯ ಸರ್ಕಾರಕ್ಕೆ ಇಂದು ಸಲ್ಲಿಸಿದೆ.
ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ಉಪ ಪಂಗಡಗಳ ಅಂಕಿ-ಅಂಶಗಳ ಸಮೀಕ್ಷೆಗಾಗಿ ರಾಜ್ಯ ಸರ್ಕಾರ ರಚಿಸಿದ್ದಂತಹ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳಾದ ಎಚ್.ಎನ್.ನಾಗಮೋಹನ ದಾಸ್ ಸಮ್ಮುಖದ ಏಕಸದಸ್ಯ ಆಯೋಗವೂ ಇಂದು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ವರದಿಯನ್ನು ಸಲ್ಲಿಸಿದ್ದಾರೆ.
ಒಳಮೀಸಲಾತಿಯ ಹಿನ್ನೆಲೆಯಿಂದ ವಿವಿಧ ಇಲಾಖಾ ನೇಮಕಾತಿ ಮತ್ತು ಬಡ್ತಿ ವಿಚಾರಗಳನ್ನು ಕೆಲವು ತಿಂಗಳುಗಳ ಕಾಲ ಸ್ಥಗಿತಗೊಳಿಸಲಾಗಿದೆ.
