ನಟ ದರ್ಶನ್‌ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿದ್ದಾರೆ. ತಮ್ಮ ನೆಚ್ಚಿನ ನಟ ಜೈಲಿನಲ್ಲಿದ್ದರೂ ಕೂಡಾ ಅವರ ನಟನೆಯ ಸಿನಿಮಾವನ್ನು ಯಶಸ್ವಿಯಾಗಿಸಲು ಅವರ ಸೆಲೆಬ್ರಿಟಿಸ್‌ಗಳೆಲ್ಲರೂ ಸಜ್ಜಾಗಿದ್ದಾರೆ.

ಜೈಲಿನಲ್ಲಿರುವ ದರ್ಶನ್‌ರವರ ನಟನೆಯ ಡೆವಿಲ್‌ ಸಿನಿಮಾದ ಮೊದಲ ಸಾಂಗ್ ರಿಲೀದ್‌ ಆಗಿ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿತ್ತು. ಅದೇ ರೀತಿ ಡೆವಿಲ್‌ ಸಿನಿಮಾದ 2ನೇ ರೋಮ್ಯಾಂಟಿಕ್‌ ಹಾಡು ತೆರೆಯ ಮೇಲೆ ಬರಲು ಸಜ್ಜಾಗಿದೆ.ಥೈಲ್ಯಾಂಡಿನಲ್ಲಿ ಶೂಟ್‌ ಆದ ಹಾಡಿನ ಪ್ರೋಮೊ ರಿಲೀಸ್‌ ಆಗಿ ಭಾರಿ ಮೆಚ್ಚುಗೆಯನ್ನು ಪಡೆದುಕೊಳ್ತಾಯಿದೆ.

ನಾಳೆ ಅಂದರೆ ಅ.10 ಶುಕ್ರವಾರ ಹಾಡು ರಿಲೀಸ್‌ ಆಗಲಿದ್ದು, ತಮ್ಮ ನೆಚ್ಚಿನ ನಟನ ಹಾಡಿಗಾಗಿ ಅವರ ಸೆಲೆಬ್ರಿಟೀಸ್‌ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.ಇದ್ರೆ ನೆಮ್ದಿಯಾಗಿರ್ಬೇಕ್‌ ಎಂಬ ಮೊದಲನೆ ಹಾಡಿನ ರೀತಿಯಲ್ಲದೇ, ವಿಭಿನ್ನ  ಶೈಲಿಯಲ್ಲಿದೆ ಎನ್ನುವುದನ್ನು ಪ್ರೋಮೊ ನೋಡಿದರೆ ತಿಳಿಯುತ್ತದೆ.

ಒಂದೇ ಒಂದು ಸಲ ಸೋತುಬಿಡು  ಎನ್ನುವ ಸಾಲಿನಿಂದ ಶುರುವಾಗುವ ಹಾಡು ಮತ್ತಷ್ಡು ಮೆಚ್ಚುಗೆಯನ್ನು ಪಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಡೆವಿಲ್‌ ಸಿನಿಮಾದ 2ನೇ ಹಾಡಿನಲ್ಲಿ ರಚನಾರೈ ಮತ್ತು ದರ್ಶನ್‌ ಸ್ಟೆಪ್‌ ಹಾಕಿರುವುದನ್ನು ಕಾಣಬಹುದು.

Leave a Reply

Your email address will not be published. Required fields are marked *