ಬಿಗ್‌ಬಾಸ್ ಸೀಜನ್ 12 ಶುರುವಾಗುತ್ತಿದ್ದಂತೆ ಹಲವು ಕಾರಣಾಂತರಗಳಿಂದ ಕೆಲವು ದಿನಗಳು ಸ್ಥಗಿತಗೊಂಡಿತ್ತು. ಬಿಗ್‌ಬಾಸ್ ಪ್ರಾರಂಭವಾದ ದಿನದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಚರ್ಚೆಯಲ್ಲಿದೆ.
ಬಿಗ್‌ಬಾಸ್-12ರಲ್ಲಿ ಈ ವಾರವೇ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, 4 ಫೈನಲಿಸ್ಟ್‌ಗಳು ಆಯ್ಕೆಯಾಗಿದ್ದಾರೆ.ಇನ್ನುಳಿದ ಅಭ್ಯರ್ಥಿಗಳು ಎಲಿಮಿನೇಟ್‌ಗೆ ನಾಮಿನೇಟ್ ಆಗಿದ್ದಾರೆ.ದ್ರುವಂತ್ ಸ್ಪಂದನಾ ಜೊತೆ ಜಗಳವಾಡಿರುವುದು ಇದೆಲ್ಲದಕ್ಕೂ ಕಾರಣವೆಂದು ಹೇಳಲಾಗಿದೆ.

ಬಿಗ್‌ಬಾಸ್ ಮನೆಯ ಮೊದಲ ಗ್ರ್ಯಾಂಡ್ ಫಿನಾಲೆಗೆ ಕೆಲವು ದಿನಗಳಷ್ಟೇ ಬಾಕಿಯಿದ್ದು, ಸ್ಪರ್ಧಿಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡಲು ಲಾಸ್ಟ್ ಚಾನ್ಸ್‌ನ್ನು ನೀಡಲಾಗಿದ್ದು, ಒಳ್ಳೆ ಹುಡುಗ ದ್ರುವಂತ್ ಎಲ್ಲಾ ಟಾಸ್ಕ್‌ಗಳಿಂದ ಹೊರಗುಳಿದಿದ್ದಾರೆ.

ಗ್ರ್ಯಾಂಡ್ ಫಿನಾಲೆಗೆ ಎಲ್ಲಾ ಸ್ಪರ್ಧಿಗಳು ತಮ್ಮ ಸಾಮರ್ಥ್ಯವನ್ನು ತೋರಿಸಲು ಸಜ್ಜಾಗಿ ನಿಂತಿದ್ದಾರೆ. ಧ್ರುವಂತ್ ಸ್ಪಂದನಾ ಜೊತೆ ಜಗಳವಾಡಿರುವುದರಿಂದ ಹೊರಗುಳಿದಿದ್ದು, ಎಲ್ಲಾ ಸ್ಪರ್ಧೆಗಳಲ್ಲಿ ಯಾವ ಸ್ಪರ್ಧಿ ಗೆಲ್ತಾರೆ ಎಂಬುದನ್ನು ನೋಡಬೇಕಿದೆ.
