ಬೆಂಗಳೂರು: ಸ್ಯಾಂಡಲ್‌ವುಡ್ ನಟ ಡಾರ್ಲಿಂಗ್ ಕೃಷ್ಣ ಮತ್ತು ಪತ್ನಿ ಮಿಲನಾ ನಾಗರಾಜ್ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಹೌದು ನಟ-ನಟಿಯರು ಕೋರ್ಟಿನ ಆವರಣದಲ್ಲಿ ಕಾಣಸಿಕ್ಕರೇ ಎಲ್ಲರ ಬಾಯಲ್ಲೂ ಅದೇ ಟಾಪಿಕ್ಕು.ಕೋರ್ಟ್ ಆವರಣದಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಫ್ಯಾಮಿಲಿ ಕೋರ್ಟಿನಲ್ಲಿ ಸೆಲೆಬ್ರಿಟಿಗಳೇ ಆಗಲೀ, ಸಾಮಾನ್ಯ ಜನರೇ ಆಗಲಿ, ಕಾಣಿಸಿಕೊಂಡರೆ ರೂಮರ್ಸ್ ಶುರುವಾದಂತೆಯೇ ಲೆಕ್ಕ.ಡಾರ್ಲಿಂಗ್ ಕೃಷ್ಣ ಕೋರ್ಟ್ ಆವರಣದಲ್ಲಿ ಕಾಣಿಸಿಕೊಂಡಿರುವುದಕ್ಕ ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ ಎನ್ನುವ ಪ್ರಶ್ನೆ ಎಲ್ಲರ ಮನಸಲ್ಲೂ ಮೂಡುತ್ತದೆ.ಆದರೆ ಇದಕ್ಕೆ ಕಾರಣವೇ ಬೇರೆಯಿದೆ.
ಕ್ಯಾಮರಾ ಕಣ್ಣಿಗೆ ಬೀಳಬಾರದೆಂದು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದರೂ ಡಾರ್ಲಿಂಗ್ ಕೃಷ್ಣ ಎಂದು ಕಂಡುಹಿಡಿದಿದ್ದಾರೆ.ಇವರು ಕೋರ್ಟಿಗೆ ಹಾಜರಾಗಿರುವುದು ಸಿನಿಮಾದ ವಿಚಾರಕ್ಕೆ ಎಂದು ತಿಳಿದುಬಂದಿದೆ.

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಟಿಸಿರುವ “ಲವ್ ಮಾಕ್ಟೇಲ್” ಸಿನಿಮಾಗೆ ಪತ್ನಿಯೇ ಬಂಡವಾಳವನ್ನು ಹಾಕಿದ್ದರು. ಲವ್ ಮಾಕ್ಟೇಲ್-1, ಲವ್ ಮಾಕ್ಟೇಲ್-2, ಇದೀಗ ಲವ್ ಮಾಕ್ಟೇಲ್-3ಕೂಡಾ ಬೆಳ್ಳಿತೆರೆಗೆ ಬರಲು ಸಿದ್ಧವಾಗುತ್ತಿದ್ದು, ಇದೇ ಕಾರಣಕ್ಕೆ ಫ್ಯಾಮಿಲಿ ಕೋರ್ಟ್ ಹೇಗಿರುತ್ತದೆ ಎಂದು ನೋಡಲು ಖುದ್ದಾಗಿ ಟಾರ್ಲಿಂಗ್ ಕೃಷ್ಣರವರೇ ಆಗಮಿಸಿ ವೀಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

