ಸೋಷಿಯಲ್‌ ಮೀಡಿಯಾಗಳಲ್ಲಿ ಹೆಣ್ಣುಮಕ್ಕಳ ವಿರುದ್ದ ಅವಹೇಳನಕಾರಿ ಪೋಸ್ಟ್‌, ನಿಂದನೆ, ಟ್ರೋಲ್‌ ಮಾಡುವ ವಿಚಾರಕ್ಕಾಗಿ ನಟಿ ರಮ್ಯಾ, ವಿಜಯಲಕ್ಷ್ಮಿ ಸರ್ಶನ್‌ ಮತ್ತು ಸುದೀಪ್‌ ಪತ್ರಿ ಸಾನ್ವಿ ಅವರು  ಬಗ್ಗೆ ಟ್ರೋಲ್‌ ಮಾಡಿರುವ ವಿಚಾರಕ್ಕೆ ಎಲ್ಲರೂ ಪೊಲೀಸ್‌ ಠಾಣೆಗೆ ದೂರು ದಾಖಲು ಮಾಡಿದ್ದಾರೆ ಇದರ ನಡುವೆ ಆಂಕರ್‌ ಅನುಶ್ರೀಯವರಿಗೂ ಟ್ರೋಲ್‌ ಮಾಡಿದ್ದ ಟ್ರೋಲ್‌ ಪೇಜಿಗೆ ಅನುಶ್ರೀಯವರು ಸರಿಯಾದ ಏಟನ್ನು ನೀಡುವುದರ ಮೂಲಕ, ಕಿಡಿಗೇಡಿಗಳ ವಿರುದ್ದ ಧ್ವನಿ ಎತ್ತಿದ್ದಾರೆ.

“ ರಾಯಚೂರ್‌ ಮೀಮ್ಸ್‌ ಬ್ರೋ”ಎಂಬ ಟ್ರೋಲ್‌ ಪೇಜಿನಲ್ಲಿ ಅನುಶ್ರೀಯವರ ವಿಡಿಯೋಗಳನ್ನು ಶೇರ್‌ ಮಾಡಿದ್ದರು. ಅದಕ್ಕೆ ಆಸ್ಕರ್‌ ಗೋ ಟು ಅನುಶ್ರೀ ಎಂವ ಕ್ಯಾಪ್ಷನ್‌ ಕೂಡಾ ಬರೆದಿದ್ದಾರೆ.ಇದಷ್ಟೇ ಅಲ್ಲದೇ ʼಇಫ್‌ ಬಕೆಟ್‌ ಹಾವ್‌ ಮೌತ್‌, ವಾರೆ ಮೇರಿ ಲಡ್ಕಿ ಎಂದು ಕೂಡಾ ಹಾಕಿದ್ದರು.

ಇತ್ತೀಚೆಗೆ 45 ಸಿನಿಮಾದಲ್ಲಿ ನಟಿಸಿರುವ ಉಪೇಂದ್ರ, ಶಿವರಾಜ್‌ಕುಮಾರ್‌ ಮತ್ತು ರಾಜ್‌ಬಿ ಶೆಟ್ಟಿಯವರನ್ನು ಸಂದರ್ಶನ ಮಾಡಿದ್ದರು. ಆ ಸಮಯದಲ್ಲಿ ಅನುಶ್ರೀಯವರು ನಾನು ತಿರುಪತಿಗೆ ಹೋದಾಗ ತಿರುಪತಿಯ ಮುಖ ಕಾಣಿಸುವ ಬದಲು ಶ್ರೀನಿವಾಸ ಕಲ್ಯಾಣದ ರಾಜ್‌ಕುಮಾರ್‌ ಅವರ ಮುಖವೇ ಕಾಣಿಸಿತು ಎಂದಿದ್ದರು. ಮತ್ತೊಂದು ಹಳೆಯ ವಿಡಿಯೋದಲ್ಲಿ ಅನುಶ್ರೀ ನಾನು ಧರ್ಮಸ್ಥಳಕ್ಕೆ ಹೋದರೆ ಮಂಜುನಾಥನ ಮುಕ ಕಾಣೀಸುವಬ ಬದಲು ಚಿರಂಜೀವಿ ಮುಖ ಕಾಣಿಸುತ್ತದೆ ಎಂದು ಹೇಳಿರುವ ವಿಡೀಯೋವನ್ನು ಟ್ರೋಲ್‌ ಮಾಡಿದ್ದಾರೆ. ಉಪೇಂದ್ರ ಸಿನಿಮಾದ ʼವಾರೆ ಮೇರೆ ಲಡ್ಕಿʼ ನಿನ್ನಂಥವರು ಈ ದೇಶದಲ್ಲಿದ್ದಾರಾ ಎನ್ನುವ ವಿಡಿಯೋವನ್ನು ಹಾಕಿ ಟ್ರೋಲ್‌ ಮಾಡಿದ್ದಾರೆ.

 ‘ಹೌದು ಏನಿವಾಗ, ಓಬವ್ವ ಅಂದಾಗ ಜಯಂತಿ ಅಮ್ಮ ನೆನಪಾಗ್ತಾರೆ. ಕಿತ್ತೂರು ಚೆನ್ನಮ್ಮ ಅಂದಾಗ ಸರೋಜಮ್ಮ ನೆನಪಾಗ್ತಾರೆ. ಶ್ರೀನಿವಾಸ ಎಂದಾಗ ಅಪ್ಪಾಜಿ.. ಮಂಜುನಾಥ ಎಂದಾಗ ಚಿರಂಜೀವಿ ಸರ್… ಅದು ಹೆಮ್ಮೆ ಪಡೋವಂತ ವಿಷಯ. ಕಾಮಲೆ ಕಣ್ಣೋರಿಗೆ ಕಾಣೋದೆಲ್ಲ ಹಳದಿ ಅನ್ನೋ ಹಾಗೆ, ನಿಮ್ಮ ಬುದ್ಧಿವಂತಿಕೆಗೆ ಹಾಗೆ ಕಾಣೋದು ಎಂದು ಟ್ರೋಲ್‌ ಪೇಜುಗಳ ವಿರುದ್ದ ಕಿಡಿಕಾರಿದ್ದಾರೆ. 

Leave a Reply

Your email address will not be published. Required fields are marked *