ಬೆಂಗಳೂರು: ಸರ್ಕಾರಿ ಶಾಲೆಗಳನ್ನು ಮುಚ್ಚಬೇಡಿ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಮನವಿಯನ್ನು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಒಂದೇ ಒಂದು ಮಗು ಇದ್ರೂ ಕೂಡಾ ಸರ್ಕಾರಿ ಶಾಲೆಯನ್ನು ಮುಚ್ಚೋದಿಲ್ಲೆಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ಶಾಲೆಗಳನ್ನು ಮುಚ್ಚುವ ಅಧಿಕಾರ ಮನಗಿಲ್ಲ ನಾವು ಶಾಲೆಗಳನ್ನು ಮುಚ್ಚುವುದಿಲ್ಲ ಎನ್ನುವ ಮಾಹಿತಿಯನ್ನು ಈಗಾಗಲೇ ಬರಗೂರು ರಾಮಚಂದ್ರಪ್ಪನವರಿಗೂ ಮಾಹಿತಿಯನ್ನು ನೀಡಲಾಗಿದೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಸ್ವ-ಇಚ್ಚೆಯಿಂದ KPS ಶಾಲೆಗೆ ವಿಲೀನ ಮಾಡುತ್ತೇವೆ ಎಂದರೆ ನಾನು ಇಲ್ಲವೆನ್ನುವುದಕ್ಕೆ ಆಗೋದಿಲ್ಲ.ನಾನು ಈಗಾಗಲೇ ಹೇಳಿದ ಹಾಗೆ 1 ಮಗು ಇದ್ದರೂ ಶಾಲೆ ಮುಚ್ಚುವುದಿಲ್ಲ.ಟೀಚರ್‌ ಇತ್ರಾರೆ ಮತ್ತು ಮದ್ಯಾಹಗನದ ಊಟವೂ ಇರುತ್ತದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *