ಬಿಗ್‌ಬಾಸ್‌ ಮನೆಯಲ್ಲಿ ಸ್ವಲ್ಪ ಕನ್ನಡ, ಸ್ವಲ್ಪ ತುಳು ಭಾಷೆಯನ್ನು ಮಾತನಾಡುತ್ತಾ ಎಲ್ಲರ ಮನಸ್ಸನ್ನು ಗೆದ್ದ ಕರಾವಳಿ ಚೆಲುವೆ ರಕ್ಷಿತಾ ಶೆಟ್ಟಿ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ವಿಕೆಂಡ್‌ನಲ್ಲಿ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮವನ್ನು ಕಿಚ್ಚ ಸುದೀಪ್‌ರವರು ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಆದರೆ ಈ ವಾರ ಸುದೀಪ್‌ ಪಂಚಾಯಿತಿ ನಡೆಸಿಕೊಡದಿರುವ ಕಾರಣ ಗೌರಿ ಕಲ್ಯಾಣ ಸಿರೀಯಲ್‌ ತಂಡ ಮನೆಗೆ ಆಗಮಿಸಿ ಬಿಗ್‌ಬಾಸ್‌ಮನೆಯವರೊಟ್ಟಿಗೆ ಮದುವೆಯ ಮಾತುಗಳನ್ನಾಡುವ ವೇಳೆ ರಕ್ಷಿತಾ ಶೆಟ್ಟಿ ತನ್ನ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ದೊಡ್ಮನೆಗೆ ಅನುಪಮಾಗೌಡ ಎಂಟ್ರಿಯಾಗಿದ್ದರು.ಅನುಪಮಾ ರಕ್ಷಿತಾ ಶೆಟ್ಟಿಯ ಹತ್ತಿರ ನೀನು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಕ್ಷಿತಾ ನನ್ನ ಮದುವೆಯಾಗುವ ಹುಡುಗ ಗಿಲ್ಲಿಯ ಹಾಗೆ ಇರಬೇಕು ಎಂಬ ಮಾತನ್ನು ಕೇಳಿದ ಬಿಗ್‌ ಬಾಸ್‌ ಮನೆಯವರೆಲ್ಲಾ ರಕ್ಷಿತಾ ಕಾಲೆಳೆದಿದ್ದಾರೆ.

ಗಿಲ್ಲಿ ತರ ಹುಡಗ ಬೇಕು ಎಂದ ರಕ್ಷಿತಾ ಮಾತು ಕೇಳಿ ತುಂಬಾ ದಿನದ ಮನದ ಮಾತುಗಳು ಎಂದು ನೆಟ್ಟಿಗರು ರಕ್ಷಿತಾರನ್ನು ಕಾಲೆಳಿದಿದ್ದಾರೆ.

Leave a Reply

Your email address will not be published. Required fields are marked *