ದಾವಣಗೆರೆ: ನಟ ದರ್ಶನ್‌ ಸದ್ಯ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾರೆ. ಇದರ ನಡುವೆ ಅವರ ನಟನೆಯ ಡೆವಿಲ್‌ ಸಿನಿಮಾ ಬಿಡುಗಡೆಯಾಗಿ ಅದ್ದೂರಿಯಾಗಿ ಪ್ರದರ್ಶನವಾಗುತ್ತಿದೆ.

ದರ್ಶನ್‌ ಜೈಲಿನಲ್ಲಿರುವ ಕಾರಣ ಕೆಲ ವ್ಯಕ್ತಿಗಳು ದರ್ಶನ್‌ ಮತ್ತು ಅವರ ಫ್ಯಾನ್ಸ್‌ಗಳ ಬಗ್ಗೆ ಮಾತನಾಡ್ತಾರೆ. ನಿಮ್ಮನ್ನು ಕೆರಳಿಸಲೇಂದೇ ಕೆಣಕುತ್ತಾರೆ ಯಾವುದೇ ಕಾರಣಕ್ಕೂ ಅವರ ಮಾತನ್ನು ಗಣನೆಗೆ ತೆಗೆದುಕೊಳ್ಳಬೇಡಿ. ಎಂದು ವಿಜಯಲಕ್ಷ್ಮೀ ದರ್ಶನ್‌ ಅಭಿಮಾನಿಗಳಿಗೆ ಮನವಿಯನ್ನು ಮಾಡಿದ್ದಾರೆ.

ಡೆವಿಲ್‌ ಸಿನಿಮಾ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಭಾನುವಾರದಂದು ವಿಜಯಲಕ್ಷ್ಮೀ ದರ್ಶನ್‌ ಮತ್ತು ಡೆವಿಲ್‌ ಚಿತ್ರತಂಡ ದಾವಣಗೆರೆಯ ಗೀತಾಂಜಲಿ ಥಿಯೇಟರಿಗೆ ಭೇಟಿ ನೀಡಿದ್ದರು.ಆ ವೇಳೆ ಅಭಿಮಾನಿಗಳನ್ನು ಕುರಿತು ಮಾತನಾಡಿದ ವಿಜಯಲಕ್ಷ್ಮೀ ದರ್ಶನ್‌, ದರ್ಶನ್‌ ಹೊರಗಡೆಯಿಲ್ಲದಿದ್ದಾಗ ಕೆಲವರು ವೇದಿಕೆಯ ಮೇಲೆ ಮತ್ತು ಮಾಧ್ಯಮಗಳಲ್ಲಿ ಕುಳಿತು ಮಾತನಾಡುತ್ತಾರೆ. ದರ್ಶನ್‌ ಬೆಂಗಳೂರಿನಲ್ಲಿದ್ದಾಗ ಅವರು ಇದ್ದಾರೆ ಎಂಬುದರ ಬಗ್ಗೆ ಮಾತನಾಡುವುದಿಲ್ಲ. ಅದ್ರೆ ದರ್ಶನ್‌ ಇಲ್ಲದ ವೇಲೆ ಅವರನ್ನು ಕುರಿತು ಮಾತನಾಡುತ್ತಿದ್ದಾರೆ ಇಂತಹ ಹೇಳಿಕೆಗಳೀಗೆ ಸೊಪ್ಪು ಹಾಕಬೇಡಿ, ಉದ್ವೇಗಕ್ಕೆ ಒಳಗಾಗದೇ ಶಾಂತಿಯಿಂದಿರಬೇಕೆಂದು ಸರ್ಶನ್‌ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.

Leave a Reply

Your email address will not be published. Required fields are marked *