ಬಿಗ್ ಬಾಸ್ ರಿಯಾಲಿಟಿ ಶೋ ಹೆಚ್ಚು ಟಿ ಆರ್ ಪಿಯನ್ನು ಪಡೆದುಕೊಂಡಿರುವ ಶೋ ಆಗಿದೆ. ಇದೀಗ ಬಿಗ್‌ಬಾಸ್ ಶೋ ಅಂತಿಮ ಘಟ್ಟವನ್ನು ತಲುಪುತ್ತಿದೆ. ಮಿಡ್ ವೀಕ್ ಎಲಿಮಿನೇಷನ್ ಟೆನ್ಷನ್ ನಡುವೆ ಬಿಗ್‌ಬಾಸ್ ಮನೆಯ ಸ್ಪರ್ಧಿಗಳ ಆಸೆಯನ್ನು ತಿಳಿಸುವಂತೆ ಹೇಳಿದ್ದು, ಅವರ ಆಸೆಯನ್ನು ಪೂರೈಸಲು ಬಿಗ್ಬಾಸ್ ಮನಸ್ಸು ಮಾಡಿದೆ ಎನ್ನಲಾಗಿದೆ.
ಮನೆಯ ಸ್ಪರ್ಧಿಗಳ ಆಸೆಗಳನ್ನು ತಿಳಿಸುವಂತೆ ಬಿಗ್ ಬಾಸ್ ಕೇಳಿದ್ದಾರೆ. ಪ್ರತಿಯೊಬ್ಬ ಸ್ಪರ್ಧಿತಮ್ಮ ಆಸೆಯನ್ನು ಹೇಳಿಕೊಳ್ಳಬಹುದಾಗಿದೆ. ಒಟ್ಟು ಮೂರು ಕನಸುಗಳನ್ನ ಪತ್ರದ ಮೂಲಕ ಬರೆದು ತಿಳಿಸಬೇಕೆಂದು ಸೂಚಿಸಿದೆ. ಆ 3 ಆಸೆಗಳಲ್ಲಿ ಒಂದನ್ನು ಬಿಗ್ಬಾಸ್ ನೆರವೇರಿಸುವುದಾಗಿ ಭರವಸೆಯನ್ನು ನೀಡಿದೆ.
ಬಿಗ್‌ಬಾಸ್ ಮಾತಿನಂತೆಯೇ ನಿನ್ನೆ ಎಲ್ಲಾ ಸ್ಪರ್ಧಿಗಳು ತಮ್ಮ ಆಸೆಗಳನ್ನು ಪತ್ರದಲ್ಲಿ ಉಲ್ಲೇಖಿಸಿ ಕ್ಯಾಮೆರಾ ಮುಂದೆ ಓದಿದ್ದಾರೆ. ಆ ಪತ್ರಗಳಲ್ಲಿ ವಿಶೇಷವಾಗಿ ಗಿಲ್ಲಿ ನಟನ 3 ಆಸೆಗಳು ಹೀಗಿವೆ..

ಬಿಗ್‌ಬಾಸ್ ಮನೆಯಲ್ಲಿ ಕುಳಿತು ಟಿವಿಯಲ್ಲಿ ಒಂದೊಳ್ಳೆ ಸಿನಿಮಾವನ್ನು ನೋಡಬೇಕು.
ಬಿಗ್‌ಬಾಸ್ ಮನೆಯಲ್ಲಿರುವ ಆನೆಯ ಮೇಲೆ ಒಮ್ಮೆ ಕುಳಿತುಕೊಳ್ಳಬೇಕು.
ನನಗೆ ‘ನಲ್ಲಿ ಮೂಳೆ’ ಅಂದ್ರೆ ತುಂಬಾ ಇಷ್ಟ, ಅದನ್ನ ಹೊಟ್ಟೆ ತುಂಬಾ ತಿನ್ನಬೇಕು. ತಿಂದ ನಂತರ ಒಂದು ಗಂಟೆಯ ಕಾಲ ಮಲಗಲು ಅವಕಾಶವನ್ನು ನೀಡಬೇಕು. ನಾನು ನಿದ್ದೆ ಮಾಡುವ ಸಮಯದಲ್ಲಿ ನಾಯಿ ಬೊಗಳುವ ಶಬ್ದ ಬರಬಾರದು ಎಂಬ ಬೇಡಿಕೆಯನ್ನು ಬಿಗ್‌ಬಾಸ್ ಮುಂದೆ ಬಹಿರಂಗಪಡಿಸಿದ್ದಾರೆ.
