ಬಿಗ್‌ಬಾಸ್ ಮನೆಯಿಂದ ಹೊರಬಂದ ಸೂರಜ್ ಸಿಂಗ್ ಮುಂದೆ ಏನು ಮಾಡ್ತಾರೆ ಎಂಬ ಅಪ್‌ಡೇಟ್ಸ್ ಸಿಕ್ಕಿದೆ. ಬಿಗ್‌ಬಾಸ್ ಮನೆಯಿಂದ ಹೊರಬಂದ ಸೂರಜ್‌ಗೆ ಕಲರ್ಸ್ ಕನ್ನಡದಲ್ಲಿಯೇ ಮತ್ತೊಮ್ಮೆ ಚಾನ್ಸ್ ಸಿಕ್ಕಿದೆ.

ಸೂರಜ್ ಸಿಂಗ್ ಕಲರ್ಸ್ ಕನ್ನಡದಲ್ಲಿ ಹೊಸದಾಗಿ ಮೂಡಿಬರುತ್ತಿರುವ ಪವಿತ್ರ ಬಂಧನ ಧಾರಾವಾಹಿಯಲ್ಲಿ ಹೀರೋ ಆಗಿ ಮಿಂಚಲಿದ್ದು, ಇದೀಗ ಪ್ರೋಮೊ ರಿಲೀಸ್ ಆಗಿದೆ.
ಪವಿತ್ರ ಬಂಧನ ಧಾರಾವಾಹಿಯು ಮೂಲತಃ ಅಣ್ಣ -ತಮ್ಮನ ಬಾಂಧವ್ಯದಿಂದ ಕೂಡಿರುವ ಕಥೆಯಾಗಿದೆ. ಹಾಗೆಯೇ ಸಿರೀಯಲ್‌ನಲ್ಲಿ ನಾಯಕಿಯಾಗಿ ಅಮೂಲ್ಯ ಭಾರದ್ವಾಜ್‌ರವರು ನಟಿಸಿಸಲಿದ್ದಾರೆ.ಈ ದಾರಾವಾಹಿಯಲ್ಲಿ ಸೂರಜ್ ಸಿಂಗ್ ಮಾಡುತ್ತಿರುವ ಪಾತ್ರದ ಹೆಸರು ದೇವದತ್ ದೇಶ್‌ಮುಖ್ ಎಂಬುದಾಗಿದ್ದು,ಅವರ ತಮ್ಮನ ಪಾತ್ರದ ಹೆಸರು ವಿಕಾಸ್ ದೇಶ್‌ಮುಖ್ ಎಂಬುದಾಗಿದೆ. ಈ ಪವಿತ್ರ ಬಂಧನದ ದಾರಾವಾಹಿಯಲ್ಲಿ ನಾಯಕಿ ಪವಿತ್ರಾ ಮತ್ತು ನಾಯಕ ಸೂರಜ್ ಸಿಂಗ್ ತಮ್ಮ ವಿಕಾಸ್ ಇವರಿಬ್ಬರು ಪ್ರೇಮಿಸುತ್ತಿರುತ್ತಾರೆ. ಕಾರಾಣಾಂತರಗಳಿಂದ ಪವಿತ್ರಾ ದೇವದತ್ ಜೊತೆಯಲ್ಲಿ ಸಪ್ತಪದಿ ತುಳಿಯುತ್ತಾಳೆ. ತಾಳಿ ಕಟ್ಟುವ ಸಮಯದಲ್ಲಿ ನಾನು ನಿನ್ನನ್ನ ಎಂದಿಗೂ ನನ್ನ ಗಂಡ ಎಂದು ಒಪ್ಪಿಕೊಳ್ಳೋದಿಲ್ಲ ಎಂದು ಸೂರಜ್‌ಗೆ ಹೇಳುವುದನ್ನು ಪ್ರೋಮೋದಲ್ಲಿ ಕಂಡುಬರುತ್ತದೆ.

ಸೂರಜ್ ಸಿಂಗ್ ಕೆನಡಾದಲ್ಲಿ ಶೆಫ್ ಆಗಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.ಅವರ ಜೊತೆಗೆ ಪಾರ್ಟ್ ಟೈಮ್ ಜಿಮ್ ಟ್ರೇನರ್ ಆಗಿಯೂ ಕೂಡಾ ಕೆಲಸ ಮಾಡುತ್ತಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಮಾಡೆಲಿಂಗ್ , ಇನ್ನಿತರ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಸೂರಜ್ ಸಿಂಗ್‌ಗೆ ಸಡನ್ ಆಗಿ ಬಿಗ್‌ಬಾಸ್ ಮನೆಗೆ ಹೋಗುವ ಅವಕಾಶ ದಕ್ಕಿತು. ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಧಾರಾವಾಹಿಯಲ್ಲೂ ಕೂಡಾಅವಕಾಶ ಸಿಕ್ಕಿರುವುದು ಇವರ ಅದೃಷ್ಟವೇ ಸರಿ. ಸೂರಜ್‌ಸಿಂಗ್ ಪವಿತ್ರ ಬಂಧನದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.ನೋಡೋಣ ಮುಂದಿನ ದಿನಗಳಲ್ಲಿ ಸೂರಜ್‌ಸಿಂಗ್ ಹೇಗೆ ಅಭಿನಯ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
