ಬಿಗ್‌ಬಾಸ್ ಸೀಜನ್ 12 ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಬಿಗ್‌ಬಾಸ್ ಮನೆಯ ಸ್ಪರ್ಧಿಗಳು ಇಷ್ಟು ದಿನ ಕಳೆದ ಕ್ಷಣಗಳನ್ನು ನೆನಪು ಮಾಡಿಕೊಳ್ಳುತ್ತಾ ಕಣ್ಣೀರಿಟ್ಟಿದ್ದಾರೆ.

ಬಿಗ್‌ಬಾಸ್ ಫಿನಾಲೆಗೆ ಇನ್ನು 1 ದಿನ ಮಾತ್ರ ಉಳಿದಿದ್ದು, ದೊಡ್ಮನೆಯಲ್ಲಿ 7 ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದು, ಪ್ರತಿಯೊಬ್ಬರು ಗೆಲ್ಲಬೇಕೆಂಬ ಮಹದಾಸೆಯನ್ನು ಇಟ್ಟುಕೊಂಡಿದ್ದಾರೆ.ಅವರು ಅನುಭವಿಸಿದ ನೋವುಗಳನ್ನು ಮೆಲುಕು ಹಾಕುತ್ತಾ ಒಬ್ಬೊಬ್ಬರು ಒಂದೊಂದು ಎಮೋಷನಲ್ ಸ್ಪೀಚನ್ನು ನೀಡುತ್ತಿರುವುದನ್ನು ಪ್ರೋಮೊದಲ್ಲಿ ಕಾಣಬಹುದು.
ಬಿಗ್‌ಬಾಸ್ ಪ್ರಾರಂಭವಾದ ದಿನದಿಂದ ಗಿಲ್ಲಿ ಎಲ್ಲರನ್ನೂ ನಗಿಸುತ್ತಾ, ರೇಗಿಸುತ್ತಾ, ತಮ್ಮ ನೈಜ ನಟನೆಯಿಂದ ಪ್ರೇಕ್ಷಕರನ್ನು ಮನರಂಜಿಸುತ್ತಾ ಬಂದಿದ್ದಾರೆ. ಸದಾ ನಗುವವರ ಹಿಂದೆ ನೋವಿನ ಕಥೆಯಿರುತ್ತದೆ ಏಂಬುದಕ್ಕೆ ಗಿಲ್ಲಿ ನಟನು ಉದಾಹರಣೆ ಎಂದರೆ ತಪ್ಪಾಗಲಾರದು. ನನ್ನ ಜೀವನದಲ್ಲಿ ನಾನು 1 ಹೊತ್ತಿನ ಊಟಕ್ಕೂ ಪರದಾಡಿದ್ದೇನೆ. ಹೊಟ್ಟೆ ಪಾಡಿಗಾಗಿ ಹಣವನ್ನು ಕಳ್ಳತನ ಮಾಡಿರೋದು, ಚಿನ್ನವನ್ನು ಕದ್ದಿರೋದು, ನೋಡಿರಬಹುದು ಅಥವಾ ಕೇಳಿರಬಹುದು. ಆದರೆ ನಾನು ಅನ್ನವನ್ನು ಕದ್ದಿದ್ದೇ ಎಂದು ಕಣ್ತುಂಬಿಕೊಂಡು ಹೇಳಿರುವುದು ಬಿಗ್‌ಬಾಸ್ ಮನೆಯ ಸ್ಪರ್ಧಿಗಳ ಕಣ್ಣು ಕೂಡಾ ತುಂಬಿಕೊಂಡಿದೆ.
ನಮ್ಮ ಮನೆಯಲ್ಲಿ ಹಾಲು ತರಲು ದುಡ್ಡಿರಲಿಲ್ಲ, ಅಕ್ಕಿ ತರಲು ಕೂಡಾ ದುಡ್ಡಿರಲಿಲ್ಲ.ನಮ್ಮ ಮನೆಯ ಪರಿಸ್ಥಿತಿಯನ್ನು ಯಾರಿಗೂ ಹೇಳಿಕೊಳ್ಳಲಾಗದಷ್ಟು ಕಷ್ಟವನ್ನು ಅನುಭವಿಸಿದ್ದೇನೆ ಎಂದು ಕಾವ್ಯಾ ಕೂಡಾ ತಮ್ಮ ಕಷ್ಟದ ದಿನಗಳನ್ನು ಹಂಚಿಕೊಂಡಿದ್ದಾರೆ
