ಬೆಂಗಳೂರು: ವಿಜಯಲಕ್ಷ್ಮಿ ದರ್ಶನ್‌ಗೆ ಸಾಮಾಜಿಕ ಜಾಲಾತಾಣಗಳಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡಿದ ಕಿಡಿಗೇಡಿಗಳ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.ಇದೀಗ ಆರೋಪಿಗಳನ್ನು ಸೈಬರ್ ಪೊಲೀಸರು ಬಂಧಿಸಿದ್ದು, ಅರೆಸ್ಟ್ ಆದ ವ್ಯಕ್ತಿಗಳು ಚಂದ್ರು ,ನಿಖಿಲ್ ಎಂದು ಗುರುತಿಸಲಾಗಿದೆ.

ದಾವಣಗೆರೆಯ್ಲಲಿ ವಿಜಯಲಕ್ಷ್ಮಿಯವರು ಹೇಳಿಕೆಯನ್ನು ನೀಡಿದ್ದರು.ಈ ಹೇಳಿಕೆಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕೆಟ್ಟ ಕಮೆಂಟ್‌ಗಳು ಬಂದಿದ್ದು, ಆ ಕಿಡಿಗೇಡಿಗಳ ವಿರುದ್ದ ಅವರು ಮಾಡಿದ ಕಮೆಂಟ್ ಇನ್ಸ್ಟಾ ಐಡಿ, 150ಕ್ಕೂ ಹೆಚ್ಚು ಸ್ಕ್ರೀನ್ ಶಾಟ್ ಸಮೇತ ದೂರನ್ನು ನೀಡಿದ್ದರು.

ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ವ್ಯವಸ್ಥೆಯ ಕುರಿತು ಅಸಮಧಾನ ವ್ಯಕ್ತಪಡಿಸಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು.ಅಶ್ಲೀಲ ಕಮೆಂಟ್ ಮಾಡಿದ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಳ್ಳದ ವಿಚಾರಕ್ಕೆ ಇತ್ತೀಚೆಗೆ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಅವರನ್ನು ಕೂಡ ಭೇಟಿ ಮಾಡಿದ್ದರು.ನಂತರ ಪೊಲೀಸ್ ಆಯುಕ್ತರು ಪರಿಶೀಲನೆ ನಡೆಸುವುದಾಗಿ ಹೇಳಿದ್ದರು.
