ಬಿಗ್‌ಬಾಸ್‌ ಮನೆಯಲ್ಲಿ ಎಲ್ಲರೂ ಅವರ ಸಮಯ ಬಂದಾಗ ಒಬ್ಬೊಬ್ಬರು ಒಂದು ರೀತಿ ಬದಲಾಗುತ್ತಾರೆ.ಯಾವಾಗಲು ಕಿತ್ತಾಡುತ್ತಿದ್ದ ಗಿಲ್ಲಿ ಧ್ರುವಂತ್‌ ಇದೀಗ ಒಂದಾಗಿದ್ದಾರೆ.

ಧ್ರುವಂತ್‌ ಗಿಲ್ಲಿ ಹೇಳುವ ಪ್ರತಿಯೊಂದು ಮಾತಿನಲ್ಲೂ ಕೊಂಕು ಹುಡುಕಿ ಅದನ್ನು ವಿರೋದಿಸುತ್ತಾ ಪ್ರತಿ ದಿನ ಜಗಳವಾಡುತ್ತಾ ಕಾಣಿಸುವಂತ ಜೋಡಿಯಾಗಿದ್ದರು.ದೊಡ್ಮನೆಯವರು ಯಾವ ಕ್ಷಣ ಹೇಗಿರುತ್ತಾರೆ ಎಂಬುದನ್ನು ನಾವು ಊಹಿಸಲು ಕಷ್ಟವಾಗುತ್ತದೆ.ಅದೇ ರೀತಿ ಹೊಸವರ್ಷದ ಸಂದರ್ಭದಲ್ಲಿ ಗಿಲ್ಲಿ ಬಳಿ ಧ್ರುವಂತ್‌ ಕ್ಷಮೆಯನ್ನು ಕೇಳಿದ್ದಾರೆ.

ಬಿಗ್‌ಬಾಸ್‌ ಗಿಲ್ಲಿಗೆ ರ್ಯಾಪ್‌ ಸಾಂಗ್‌ ಬರೆಯಲು ಹೇಳಿದ್ದರು. ಬಿಗ್‌ಬಾಸ್‌ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಏನಾಗಿದೆ ಎಂಬುದು ಉಲ್ಲೇಖವಾಗಿರಬೇಕು ಎಂದು ಸೂಚಿಸಿತ್ತು.ಗಿಲ್ಲಿ ಹಾಡನ್ನು ಬರೆಯುವಾಗ ಧ್ರುವಂತ್‌ ನನ್ನ ಹೆಸರನ್ನು ಹಾಡಿನಿಂದ ತೆಗಿ ಎಂದು ಜಗಳ ಮಾಡಿದ್ದಾರೆ. ಅಲ್ಲೇ ಇದ್ದ ರಘು ಎಲ್ಲರ ಬಗ್ಗೆ ಪಾಸಿಟಿವ್‌ ಆಗಿ ಹಾಡು ಬರಿ ಎಂದು ನಾನು ಹೇಳಿದ್ದೆನೆ ಎಂದು ಎಷ್ಟು ಮನವೊಲಿಸಲು ಪ್ರಯತ್ನಿಸಿದರೂ ಧ್ರುವಂತ್‌ ಕಿವಿಗೊಡಲಿಲ್ಲ. ನಂತರ ಹಾಡಿನಲ್ಲಿದ್ದ ಸಾಲುಗಳನ್ನು ನೋಡಿ ನಕ್ಕಿದ್ದಾರೆ.

‘ಧ್ರುವಂತ್​​ ಎಂದರೆ ಭಕ್ತಿ, ಅದುವೇ ಅವರಿಗೆ ಶಕ್ತಿ’ ಎಂಬ ಸಾಲನ್ನು ಹಾಡಿನಲ್ಲಿ ಬರೆಯಲಾಗಿತ್ತು ಇದನ್ನು ನೋಡಿದ  ಧ್ರುವಂತ್​​ಗೆ ಖುಷಿಯಾಗಿದೆ. ಇದಾದ ನಂತರ ಗಿಲ್ಲಿ ಬಳಿ ಕ್ಷಮೆಯನ್ನುಯಾಚಿಸಿದ್ದಾರೆ ಎಂದು  ತಿಳಿದಿದೆ. ನಂತರ ‘ಹ್ಯಾಪಿ ನ್ಯೂ ಇಯರ್’ ಎಂದು ವಿಶ್ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *