ಬಿಗ್‌ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಹಲವು ಬದಲಾವಣೆಗಳು, ಜಗಳಗಳು, ತರ್ಲೆಗಳು ಹೀಗೆ ಒಂದಿಲ್ಲೊಂದು ಕಾರಣಕ್ಕೆ ಜನರ ಕುತೂಹಲವನ್ನು ಹೆಚ್ಚಿಸುತ್ತಾ ಬಂದಿದೆ. ಈ ಬಾರಿ ದೊಡ್ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆಯ ಕಾವು ಹೆಚ್ಚಾಗಿದ್ದು, ಈ ಸಲ ಗಿಲ್ಲಿನಟನನ್ನು ಗುರಿಯಾಗಿಸಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ನಾಮಿನೇಷನ್ ಬಿಸಿ ಎಲ್ಲರನ್ನೂ ಸುಡದೆ ಬಿಡದು. ಹಾಗೆಯೇ ಈ ಬಾರೀ ನಾಮಿನೇಷನ್ ಪ್ರಕ್ರಿಯೆ ವಿಭಿನ್ನವಾಗಿದ್ದು, ಎಲ್ಲಾ ಸ್ಪರ್ಧಿಗಳ ಬಟ್ಟೆಗಳನ್ನು ಗಾರ್ಡನ್ ಏರಿಯಾದಲ್ಲಿ ಇರಿಸಿದ್ದು, ನಾಮಿನೇಟ್ ಆದ ವ್ಯಕ್ತಿಯ ಬಟ್ಟೆಗಳನ್ನು ಕಲ್ಲಿಗೆ ಒಗೆಯುತ್ತಾ ಕೊಳೆಯನ್ನು ತೊಳೆಯುತ್ತಾ ನಾಮಿನೇಷನ್ ಮಾಡಬೇಕಾಗಿದೆ ಎಂಬ ಟಾಸ್ಕ್ ನೀಡಲಾಗಿತ್ತು.

ಬಿಗ್‌ಬಾಸ್ ಹೇಳಿದ ಹಾಗೆಯೇ ಜಾಹ್ನವಿ ಧ್ರುವಂತ್ ಬಟ್ಟೆಯನ್ನು ತೆಗೆದುಕೊಂಡು ಕಲ್ಲಿಗೆ ಹೊಡೆಯುತ್ತಾ ನಾಮಿನೇಟ್ ಮಾಡಿದ್ದಾರೆ. ಅಂತೆಯೇ ಧ್ರುವಂತ್ ಅಶ್ವಿನಿಗೌಡರವರ ಹೆಸರು ತೆಗೆದುಕೊಂಡು ಇವರು, ಫೇಕ್, ಮುಖವಾಡ ಧರಿಸಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಜಾಹ್ನವಿ ಮತ್ತು ಅಶ್ವಿನಿಗೌಡ ಮಿಸ್ ಲೀಡ್ ಮಾಡಿರುವಷ್ಟು ಬೇರೆ ಯಾವ ಅಭ್ಯರ್ಥಿಯೂ ಮಾಡಿಲ್ಲವೆಂದು ಕಿರುಚಿದ್ದಾರೆ.

ಧ್ರುವಂತ್ ಮಾತಿಗೆ ಕೋಪಿಸಿಕೊಂಡ ಅಶ್ವಿನಿಗೌಡ ನಾವಲ್ಲ ಫೇಕ್ ಅಲ್ಲ ನೀವು. ನೀವು ನಮ್ಮನ್ನು ಮಿಸ್ ಲೀಡ್ ಮಾಡಿ ನಿಮ್ಮ ಸಪರ್ದಿಗೆ ತೆಗೆದುಕೊಳ್ಳಲು ನೋಡಿದ್ರಿ. ಆದರೆ ನಾವು ಮಲ್ಲಮ್ಮನ ರೀತಿ ಮುಗ್ಧರಲ್ಲ ಎಂದು ರೇಗಾಡಿದ್ದಾರೆ.

ಬಿಗ್‌ಬಾಸ್ ಮನೆಗೆ ಬಂದಾಗಿನಿಂದ ಇದೇ ಮೊದಲು ರಕ್ಷಿತಾ ಗಿಲ್ಲಿನಟನ ಹೆಸರನ್ನು ತೆಗೆದುಕೊಳ್ಳುವುದರ ಮೂಲಕ ಎಲ್ಲರಲ್ಲೂ ಕುತೂಹಲವನ್ನು ಹುಟ್ಟುಹಾಕಿದ್ದಾಳೆ.

ಕಳೆದ 2 ವಾರಗಳಿಂದ ಗಿಲ್ಲಿ ರಕ್ಷಿತಾ ನಮ್ಮ ವಂಶದ ಕುಡಿ ಎಂದು ಹೇಳಿಕೊಂಡು ಒಡಾಡುತ್ತಿದ್ದರು. ಅದಲ್ಲದೇ ಅಶ್ವಿನಿಗೌಡ, ಜಾಹ್ನವಿ ರಕ್ಷಿತಾಳನ್ನು ಟೀಸ್ ಮಾಡಲು ಬಂದಾಗ ಅವಳ ಪರವಾಗಿ ಬ್ಯಾಟ್ ಬೀಸಿದ್ದು, ಇದೇ ಗಿಲ್ಲಿ ನಟ. ಆದರೇ ಇದೀಗ ರಕ್ಷಿತಾ ಗಿಲ್ಲಿ ವಿರುದ್ದವೇ ತಿರುಗಿಬಿದ್ದಿರುವುದಕ್ಕೆ ಕಾರಣವೇನು ಎಂಬುದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.
