ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ಕನ್ನಡ ಚಿತ್ರರಂಗದ ಚಾಲೆಂಜಿಂಗ್‌ ಸ್ಟಾರ್‌ ಎಂದೇ ಬಿರುದನ್ನು ಪಡೆದುಕೊಂಡಿರುವ ನಟ ದರ್ಶನ್‌ ನಟನೆಯ ಡೆವಿಲ್‌ ಸಿನಿಮಾದ ಪೋಸ್ಟರ್‌ರೊಂದನ್ನು ಸಂಸದ ಪ್ರತಾಪ್‌ ಸಿಂಹ ಬಿಡುಗಡೆ ಮಾಡಿ ಸಿನಿಮಾದ ಪ್ರಚಾರವನ್ನು ಮಾಡಿದ್ದಾರೆ.

ಪೋಸ್ಟರ್‌ ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು, ನಾನು ದರ್ಶನ್‌ ಅಭಿಮಾನಿ . ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಾಯಕ ನಟರು ಸ್ಟಾರ್‌ಗಳಾಗಿ ಮೆರೆದಿದ್ದಾರೆ. ಆದರೆ, ಅತಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿರುವುದು, (ಹೊಂದಿರುವುದು) ಯಾರೇಂದರೆ ಅದು ನಟ ದರ್ಶನ್‌ ಮಾತ್ರ. ಅವರ ನಟನೆಯ ಚಿತ್ರಗಳನ್ನು ನೋಡುತ್ತಾ ಬಂದಿದ್ದೇನೆ ಎಂದು ಹೇಳಿದ್ದಾರೆ.

ದರ್ಶನ್‌ ನಟನೆಯ ಮೆಜೆಸ್ಟಿಕ್‌, ಕರಿಯ ಸಿನಿಮಾಗಳು ತುಂಬಾ ಚೆನ್ನಾಗಿ ಮೂಡಿಬಂದಿದ್ದವು. ಕರಿಯ ಚಿತ್ರದ ಕೆಂಚಾಲೋ ಮಂಚಾಲೋ ಹಾಡು ಪಡ್ಡೆ ಹುಡುಗರನ್ನು ಕುಣಿಸಿತ್ತು. ನಾನು ಮೊದಲಿನಿಂದಲೂ ದರ್ಶನ್‌ ಅಭಿಮಾನಿ ಅವರ ಸಿನಿಮಾಗಳನ್ನು ನೋಡುತ್ತಾ ಬಂದಿದ್ದೇನೆ.

ಅವರು ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಅವರ ನಟನೆಯ ಡೆವಿಲ್‌ ಸಿನಿಮಾ ಡಿಸೆಂಬರ್‌ 12 ಕ್ಕೆ ಬಿಡುಗಡೆಯಾಗಬೇಕಿತ್ತು. ಆದ್ರೆ ಅಭಿಮಾನಿಗಳ ಒತ್ತಾಯಕ್ಕೆ ಡಿಸೆಂಬರ್‌ 11ಕ್ಕೆ ಸಿನಿಮಾವನ್ನು ಬಿಡುಗಡೆ ಮಾಡಲಿದ್ದಾರೆ ಬಿಡುಗಡೆಯಾಗುತ್ತದೆ ಎಂದು ಹೇಳಿದ್ದಾರೆ.

ಕನ್ನಡದ ಸಿಪ್ರಿಯರು ಸಿನಿಮಾವನ್ನು ಯಶಸ್ವಿಯಾಗಿ ಗೆಲ್ಲಿಸಲಿ. ತಾಯಿ ಚಾಮುಂಡೇಶ್ವರಿಯು ದರ್ಶನ್‌ರವರಿಗೆ ಒಳ್ಳೆಯದನ್ನು ಮಾಡಲಿ. ದರ್ಶನ್‌ ಮೇಲೆ ದೇವರ ಕೃಪೆಯಿರಲಿ ಮತ್ತು ಅವರ ಸಿನಿಮಾ ಯಶಸ್ಸು ಕಾಣಲಿ ಎಂದು ಶುಭ ಹಾರೈಸುವ ಮೂಲಕ ಡೆವಿಲ್‌ ಚಿತ್ರದ ಪೋಸ್ಟರ್‌ನ್ನು ಬಿಡುಗಡೆ ಮಾಡಿದ್ದಾರೆ.

Leave a Reply

Your email address will not be published. Required fields are marked *