ಬಿಗ್‌ಬಾಸ್ ಮನೆಯಲ್ಲಿ ವೈಲ್ಡ್ ಎಂಟ್ರಿಯಾಗಿ ರಜತ್ ಮತ್ತು ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಉಗ್ರಂ ಮಂಜು, ಮುಂತಾದವರು ಸೇರ್ಪಡೆಯಾಗಿದ್ದಾರೆ.
ಕಿಚ್ಚ ಸುದೀಪ್ ಪಂಚಾಯ್ತಿಯಲ್ಲಿ ರಜತ್ ಹಾಗೂ ಚೈತ್ರಾಗೆ ಟಾಸ್ಕ್‌ವೊಂದನ್ನು ನೀಡುತ್ತಾರೆ ಅದೇನೆಂದರೆ ಗಿಲ್ಲಿ ಮನೆಗೆ ಕಾಲ್ ಮಾಡಿ ಅವನ ವಿರುದ್ದ ಮಾತನಾಡುವಂತೆ ಅಂತೆಯೇ ಗಿಲ್ಲಿ ಅವರ ಮಾತಿಗೆ ಕೌಂಟರ್ ಕೊಡುವಂತೆ ಕಾಲ್ ಮಾಡಬೇಕು ಎನ್ನುವುದಾಗಿತ್ತು.
ರಜತ್ ಗಿಲ್ಲಿ ಮನೆಗೆ ಪೋನ್ ಮಾಡಿ “ನಿಮ್ಮ ಗಿಲ್ಲಿಯದ್ದು, ಬರೀ ಮಾತು ಅಷ್ಟೇಯಾವಾಗ್ಲೂ ಆಡ್ತೀಯ ಆಟ….ಟ ಆಡು ಫಸ್ಟು ಅಮೇಲೆ ಮಾತಾಡು ಎಂದು ಕಂಪ್ಲೇಂಟ್ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಗಿಲ್ಲಿ “ ರಜತ್ ಮನೆಗೆ ಎಂಟ್ರಿಯಾಗುವಾಗ ಮಾಸ್ ಆಗಿ ಬಂದು ಇದೀಗ ಸ್ವಲ್ಪ ಟುಸ್ ಪಟಾಕಿ ಆಗಿದ್ದಾರೆ ನಾನು ಏನು ಅಂತ ಗೇಮಿನಲ್ಲಿ ನೋಡಿಸ್ತಿನಿ ಎಂದು ಟಾಂಗ್ ನೀಡಿದ್ದಾರೆ.

ಚೈತ್ರಾ ಕುಂದಾಪುರ ಸರದಿ.”ಗಿಲ್ಲಿ ಮಾತಾಡಬೇಕೊ ಇಲ್ಲಾ ಸೈಲೆಂಟ್ ಆಗಿ ಇರಬೇಕೊ ಎಂಬ ಗೊಂದಲದಲ್ಲಿದ್ದಾನೆ” ಎಂದು ಟಾಂಗ್ ಕೊಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಗಿಲ್ಲಿ ʼನಾನು ಮಾತಾಡಿದ್ರೆ ಎಲ್ಲಿ ಇವರು ಹೋರಟು ಹೋಗ್ತಾರೋ ಎಂದು ಸುಮ್ನೆ ಇದ್ದೀನಿ ಎಂದು ಉತ್ತರ ನೀಡಿದ್ದಾನೆ ಗಿಲ್ಲಿ.
ರಜತ್, ಗಿಲ್ಲಿ, ಮತ್ತು ಚೈತ್ರಾ ಕುಂದಾಪು ಆಡುವ ರೀತಿಯನ್ನು ನೋಡಿ ಪ್ರೇಕ್ಷಕರು ತುಂಬಾ ಎಂಜಾಯ್ ಮಾಡುತ್ತಿದ್ದಾರೆ. ವೈಲ್ಡ್ ಕಾರ್ಡಿನಲ್ಲಿ ಎಂಟ್ರಿಯಾದ ಸ್ಪರ್ಧಿಗಳು ಗಿಲ್ಲಿಯನ್ನು ಮೂಲೆ ಗುಂಪಾಗಿ ಮಾಡ್ತಾರ ಎನ್ನುವ ಸಂಶಯ ಮೂಡಿದೆ.ಅದೇ ರೀತಿ ಇವರೆಲ್ಲರ ಬಾಯಿಯನ್ನು ಗಿಲ್ಲಿ ಮುಚ್ಚಿಸ್ತಾನಾ ಎನ್ನುವ ಅಭಿಪ್ರಾಯವೂ ಜನರಲ್ಲಿ ಮೂಡಿದೆ.
