ಬೆಂಗಳೂರು: ಫ್ರೀಡಂ ಪಾರ್ಕಿನಲ್ಲಿ ನಾಳೆ ಪ್ರತಿಭಟನಾ ರ್ಯಾಲಿ ನಡೆಯಲಿದ್ದು ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಆದ್ದರಿಂದ ಕೆಲವು  ರಸ್ತೆ ಸಂಚಾರವನ್ನು ಬಂದ್‌ ಮಾಡಲಾಗುತ್ತದೆ.

ಬಿಜೆಪಿಗರ ವಿರುದ್ದ ಮತ್ತು ಮತಗಳ್ಳತನ ಆರೋಪವನ್ನು ಖಂಡಿಸಿ ರ್ಯಾಲಿ ನಡೆಸಲಾಗುತ್ತದೆ. ಆದ್ದರಿಂದ ಕೆಲವೆಡೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು ಪರ್ಯಾಯ ಮಾರ್ಗಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಶೇಷಾದ್ರಿ ಪುರಂ ರಸ್ತೆ, ಖೋಡಾ ಸರ್ಕಲ್‌ ಮತ್ತು ಶಾಂತಲಾ ಜಂಕ್ಷನ್‌, ಹಳೆ ಜೆಡಿಎಸ್‌ ರಸ್ತೆಯಲ್ಲಿ ಸಂಚಾರವನ್ನು ಬಂದ್‌ ಮಾಡಲಾಗಿದ್ದು, ರಾಜೀವ್‌ ಗಾಂಧಿ ಸರ್ಕಲ್‌, ಮಂತ್ರಿಮಾಲ್‌ ರಸ್ತೆ,ಲುಲು ಮಾಲ್‌, ಸ್ವಸ್ತಿಕ್‌ ಸರ್ಕಲ್‌, ಶೇಷಾದ್ರಿಪುರಂ, ರೇಸ್‌ ಕೋರ್ಸ್‌ ಫ್ಲೈ ಒವರ್‌ ಮತ್ತು ನೆಹರು ಸರ್ಕಲ್‌ ಕಡೆಯಿಂದ ಸಂಚಾರ ಮಾಡಬಹುಯದಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *