ಯಾರಿಗೆ ತಾನೇ ಸುಂದರವಾಗಿ ಕಾಣಿಸಬೇಕು ಎಂದು ಆಸೆ ಇರುವುದಿಲ್ಲ. ಎಲ್ಲಾ ಹೆಣ್ಣುಮಕ್ಕಳಿಗೂ ನಾನು ಸುಂದರವಾಗಿ ಕಾಣಬೇಕೆಂಬ ಹಂಬಲ ಇದ್ದೇ ಇರುತ್ತದೆ.

ಸುಂದರವಾಗಿ ಕಾಣಲು ಯಾರು ಯಾವ ಪ್ರಾಡಕ್ಟ್‌ ಉಪಯೋಗಿಸುತ್ತಾರೆ. ಯಾರು ಸಜೆಸ್ಟ್‌ ಮಾಡ್ತಾರೆ ಆ ಪ್ರಾಡಕ್ಟ್‌ ಖರೀದಿಸಿ ಬಳಸಲು ಪ್ರಾರಂಭಿಸುತ್ತಾರೆ. ಆದರೆ ಅವರ ತ್ವಚೆಯಲ್ಲಿ ಯಾವುದೇ ಬದಲಾವಣೆಯಾಗದಿದ್ದರೆ ಈ ಪ್ರಾಡಕ್ಟ್‌ ಏನು ಕೆಲ್ಸ ಮಾಡಲ್ಲ ಸುಮ್ನೆ ದುಡ್ಡು ದಂಡ ಆಯ್ತು ಎಂಬ ಅಲಸ್ಯದ ಮಾತುಗಳನ್ನು ಆಡುತ್ತಾರೆ.

ಕೆಲವು ಪ್ರಾಡಕ್ಟ್‌ಗಳು ಕೆಲವು ಸ್ಕಿನ್‌ ಟೋನ್‌ಗಳಿಗೆ ಮಾತ್ರ ಸೆಟ್‌ ಆಗುತ್ತದೆ. ಉದಾಹರಣೆಗೆ ನಾನು ಯೂಸ್‌ ಮಾಡುವ ನಿವಿಯಾ ಮಾಯಿಶ್ಚರೈಸರ್‌ ನನ್ನ ಸ್ಕಿನ್‌ ಟೋನಿಗೆ ಸೆಟ್‌ ಆಗುತ್ತದೆ. ಹಾಗಂತ ಬೇರೆಯವರ ತ್ವಚೆಗೂ ಸೆಟ್‌ ಆಗಬೇಕು ಅಂತೆನಿಲ್ಲವಲ್ಲ. ಆದ್ದರಿಂದ ನಿಮ್ಮ ತ್ವಚೆಗೆ ಅನುಗುಣವಾಗಿ ಪ್ರಾಡಕ್ಟ್‌ಗಳನ್ನು ಖರೀದಿಬೇಕು ಎನ್ನುವುದು ನನ್ನ ಸೂಚನೆ.

ಅದೇ ರೀತಿ ಎಲ್ಲರ ಮನೆಯ ಮುಂದೆಯೂ ಆಲೋವೆರಾವನ್ನು ಬೆಳೆಸಿರುತ್ತಾರೆ. ನಮ್ಮ ಮನೆಯಲ್ಲಿರುವ ಆಲೋವೆರಾವನ್ನು ಬಳಸಿಕೊಂಡು ನಮ್ಮ ತ್ವಚೆಯನ್ನು ಆರೋಗ್ಯವಾಗಿಡಬೇಕೆಂದು ಅದನ್ನು ಹಚ್ಚಿಕೊಳ್ಳುತ್ತಾರೆ. ಈ ಆಲೋವೆರಾ ಎಲ್ಲಾ ಚರ್ಮದವರೆಗೂ ಸೆಟ್‌ ಆಗಲ್ಲ.

ಬನ್ನಿ ಯಾವ ಯಾವ ತ್ವಚೆ ಹೊಂದಿರುವವರಿಗೆ ಇದರ ಪರಿಣಾಮ ಹೇಗಾಗುತ್ತದೆ ಎಂಬುದನ್ನು ತಿಳಿಯೋಣ.

  1. ಒಣಚರ್ಮ: ಕೆಲವು ತ್ವಚೆಯೂ ಶುಷ್ಕವಾಗಿರುತ್ತದೆ. ಚಳಿಗಾಲ ಬಂದರಂತೂ ಅವರ ಚರ್ಮ ಒಣಗಿ ಮರುಭೂಮಿಯಂತಾಗಿರುತ್ತದೆ. ಡ್ರೈ ಸ್ಕಿನ್‌ಗೆ ಆಲೋವೆರಾ ಹಚ್ಚಿದರೆ ನಿಮ್ಮ ತ್ವಚೆಯನ್ನು ಮತ್ಷ್ಟು ಒಣಗುವಂತೆ ಮಾಡುತ್ತದೆ.ಆದ್ದರಿಂದ ಆಲೋವೆರಾ ಬಳಸುವ ಮುನ್ನ ನಮ್ಮ ತ್ವಚೆಗೆ ಇದು ಸರಿಹೊಂದುತ್ತಾ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.
  2. ಪಿಂಪಲ್ಸ್‌ ಇರುವವರು: ನಿಮ್ಮ ತ್ವಚೆಯಲ್ಲಿ ಗುಳ್ಳೆಗಳು, ಮೊಡವೆಗಳಾಗಿದ್ದರೆ ಈ ಆಲೋವೆರಾ ಮತ್ತಷ್ಟು ಹೆಚ್ಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ನಿಮ್ಮ ತ್ವಚೆಗೆ ಹಚ್ಚುವ ಮುನ್ನ ಚರ್ಚಿಸುವುದು ಒಳಿತು.
  3. ಸೂಕ್ಷ್ಮ ತ್ವಚೆ: ಸೆನ್ಸಿಟಿವ್‌ ಸ್ಕಿನ್‌ ನಿಮ್ಮದಾಗಿದ್ದರೆ, ಯಾವುದೇ ಕ್ರಿಮುಗಳನ್ನಾಗಲಿ ಬಳಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಒಳಿತು.ಏಕೆಂದರೆ ಆಲೋವೆರಾ ಹಚ್ಚಿದ ನಂತರ ತ್ವಚೆಯಲ್ಲಿ ತುರಿಕೆ, ದದ್ದುಗಳು, ಮತ್ತು ಚರ್ಮ ಸುಟ್ಟುಹೋಗುವಂತಾಗುತ್ತದೆ .

ನಮ್ಮ ತ್ವಚೆಗೆ ಯಾವುದೇ ಪ್ರಾಡಕ್ಟ್‌ಗಳನ್ನು ಹಚ್ಚುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳ್ಳೇದು.ಯಾಕೆಂದರೆ ತ್ವಚೆಯನ್ನು ಸುಂದರವಾಗಿಡಲು ಮಾಡುವ ಆರೈಕೆಯೂ ನಮ್ಮ ತ್ವಚೆಯನ್ನು ಮತ್ತಷ್ಟು ಹಾನಿಗೊಳಗಾಗುವಂತೆ ಮಾಡಬಹುದು ಎಚ್ಚರಿಕೆ.

Leave a Reply

Your email address will not be published. Required fields are marked *