ನವದೆಹಲಿ:ಅಮುಲ್ ಮತ್ತು ಮದರ್ ಡೈರಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆಗಳನ್ನು ಕಡಿಮೆ ಮಾಡಲಾಗಿದ್ದು, ಹಾಲಿನ ಬೆಲೆ 2 ರೂಗಳಷ್ಟು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
ಸರ್ಕಾರದ ಜಿಎಸ್‌ಟಿ ಪರಿಷ್ಕರಣೆಯ ನಂತರ ಡೈರಿ ಮತ್ತು ಡೈರಿಯ ಉತ್ಪನ್ನಗಳ ಬೆಲೆಗಳನ್ನು ಕಡಿಮೆ ಮಾಡಲಾಗಿದೆ. ಇದರಿಂದ ಗ್ರಾಹಕರ ಹೊರೆ ಕಡಿಮೆಯಾಗಿ ಎಲ್ಲರ ಕೈಗೆಟುಕುವ ಬೆಲೆಯಲ್ಲಿ ಎಲ್ಲರಿಗೂ ತಲುಪಿಸುವ ಉದ್ದೇಶವಾಗಿದ್ದು, ಇದು ಸೆಪ್ಟೆಂಬರ್22 ರಿಂದ ಜಾರಿಯಾಗಲಿದೆ ಎಂದು ಡೈರಿ ಬ್ರಾಂಡ್ ತಿಳಿಸಿದೆ.
