ನಮ್ಮ ಹಿರಿಯರು ಮೊದಲಿನಿಂದಲೂ ಗಣೇಶ ಚತುರ್ಥಿಯನ್ನು ಆಚರಿಸಿಕೊಂಡು ಬಂದಿದ್ದಾರೆ.ಮಾರುಕಟ್ಟೆಯಲ್ಲಿ ವಿವಿಧ ರೀತಿಯ ತರಾವರಿ ಗಣೇಶಗಳನ್ನು ಮಾರಾಟ ಮಾಡಲಾಗುತ್ತದೆ. ಹೀಗೆ ರಾಸಾಯನಿಕ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ ಬಣ್ಣದ ವಿಗ್ರಹಗಳನ್ನು ಖರೀದಿಸಿ ಪೂಜಿಸಿದ ನಂತರ ಕೆರೆಬಾವಿಗಳಲ್ಲಿ ವಿಸರ್ಜನೆ ಮಾಡ್ತಾರೆ.ಈ ಕಾರಣದಿಂದಾಗಿ ಜಲಚರಗಳು , ಪ್ರಾಣಿ ಪಕ್ಷಿಗಳ ಜೀವಕ್ಕೆ ಕಂಟಕವಾಗುತ್ತದೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲಮೂಲವನ್ನು ರಕ್ಷಿಸುವ ಸಲುವಾಗಿ 2016 ಜುಲೈ 20ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ರಾಸಾಯನಿಕ ಮಿಶ್ರಿತ ಬಣ್ಣ ಲೇಪನ ಮಾಡಿರುವ ಮೂರ್ತಿಗಳನ್ನು ಕೆರೆ ಮತ್ತು ಜಲಮೂಲಗಳಲ್ಲಿ ವಿಸರ್ಜನೆ ಮಾಡುವುದನ್ನು ನಿಷೇಧಿಸಿದೆ.ಎಲ್ಲಾ ಭಕ್ತಾಧಿಗಳು , ಸಾರ್ವಜನಿಕರು ಪರಿಸರಸ್ನೇಹಿ ಹಬ್ಬವನ್ನು ಆಚರಿಸಿ ಜಲಸಂಪನ್ಮೂಲವನ್ನು ರಕ್ಷಿಸಲು ಸಹಕರಿಸಬೇಕು.
ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳು ಹೀಗಿವೆ:
ಬಣ್ಣ ರಹಿತ ಪರಿಸರಸ್ನೇಹಿ ಮೂರ್ತಿಗಳನ್ನು ಬಳಸಬೇಕು.
ಬಿಬಿಎಂಪಿ ನಿಗಧಿಪಡಿಸಿರುವ ಸ್ಥಳಗಳಲ್ಲಿ ಮೂರ್ತಿಯನ್ನು ವಿಸರ್ಜನೆ ಮಾಡಬೇಕು
ಗೌರಿ ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸಮಯದಲ್ಲಿ ಹೂ, ಹಣ್ಣು ಕಾಯಿಗಳನ್ನು ಬೇರ್ಪಡಿಸಿ ನಗರಸಭೆ ಪುರಸಭೆ ಕಸ ವನ್ನು ಸಂಗ್ರಹಿಸುವ ಗಾಡಿಗೆ ಹಾಕಬೇಕು
ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು 200ರ ಅನ್ವಯ ಮೇ 10ರಂದು ಹೊರಡಿಸಿರುವ ಸುತ್ತೋಲೆಯಂತೆ ಪೆಂಡಲ್, ವಿದ್ಯುತ್ ಉತ್ಪನ್ನಗಳನ್ನು ಬಳಸಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದಿರಬೇಕು ಮತ್ತು ಪ್ಲಾಸ್ಟಿಕ್ ಬಳಕೆ ಮಾಡದೆ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸಬೇಕೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಪ್ಪಳ ಪ್ರಾದೇಶಿಕ ಕಛೇರಿಯು ಪ್ರಕಟಣೆ ಮಾಡಿದೆ.
