ಸಿಎಂ ಸಿದ್ದರಾಮಯ್ಯನವರು ದೇವರಾಜ್‌ ಅರಸ್‌ ಆಗಲು ಎಂದಿಗೂ ಸಾದ್ಯವಿಲ್ಲವೆಂದು ಪ್ರತಾಪ್‌ಸಿಂಹ ಹೇಳಿದ್ದಾರೆ.

ಮಡಿಕೇರಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ದೇವರಾಜ್‌ ಅರಸು ಅವರ ಹತ್ತಿರ ಬರಲು ಸಾದ್ಯವಿಲ್ಲ. ದೇವರಾಜು ಅರಸುರವರು ನಮ್ಮನ್ನಗಲೀ ದಶಕಗಳೇ ಕಲೆದಿವೆ.ಅವರನ್ನು ಜನರೂ ಈಗಲೂ ಪೂಜ್ಯ ಭಾವನೆಯಿಂದ ನೋಡುತ್ತಾರೆಬ ಎಂದರೆ ಇಮ್ಯಾಜಿನ್‌ ಮಾಡಿಕೊಳ್ಳಿ ಅವರ ಕೊಡುಗೆ ಎಷ್ಟಿರಬಹುದು ಎಂದು.ಎಲ್ಲರಿಗೂ ವಯಸ್ಸಾಗುತ್ತದೆ. ಸಿಎಂ ಸಿದ್ದರಾಮಯ್ಯನವರು ಸಿಎಂ ಕುರ್ಚಿಯಲ್ಲಿ ಕುಳಿತುಕೊಂಡು ಟೈಮ್‌ ಪಾಸ್‌ ಮಾಡ್ತಾರೆ. ಇದಕ್ಕೆ ಹೊಸ ದಾಖಲೆಯನ್ನು ಮಾಡಿದ್ದಾರೆ ಎಂದು ಹೇಳುತ್ತಾರೆ. ದೇವರಾಜು ಅರಸು ಅಲ್ಲ ಅವರ ಪಕ್ಕಕ್ಕೆ ಬರಲು ಸಾದ್ಯವಿಲ್ಲವೆಂದು ವಾಗ್ದಾಳಿ ನಡೆಸಿದ್ದಾರೆ.

ದೇವರಾಜು ಅರಸು ಸಣ್ಣ ಸಮುದಾಯದವರ ಏಳಿಗೆಗಾಗಿ ದುಡಿಸಿದ್ದಾರೆ.ಕೃಷಿ ಕೆಲಸ ಮಾಡುವವರಿಗೆ ಉಳುವವನೆ ಭೂಮಿಯ ಒಡೆಯ ಎನ್ನುವ ಯೋಜನೆಯನ್ನು ಜಾರಿ ಮಾಡಿದ್ರು. ಸಾಮಾನ್ಯರನ್ನೆಲ್ಲಾ ಅವರಿಗೆ ಹೋಲಿಕೆ ಮಾಡಬೇಡಿ. ಸಿಎಂ ಸಿದ್ದರಾಮಯ್ಯನವರು 2 ಬಾರಿ ಮುಖ್ಯಮಂತ್ರಿಗಳಾಗಿ ಹೆಚ್ಚು ಸಾಲವನ್ನು ಮಾಡುವುದರ ಮೂಲಕ ಸಾಧನೆ ಮಾಡಿದ್ದಾರೆ ಎಂದು ಕುಟುಕಿದ್ದಾರೆ.

Leave a Reply

Your email address will not be published. Required fields are marked *