ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ನವೆಂಬರ್‌ ಮಾಸದಲ್ಲಿ ದೊಡ್ಡ ಕ್ರಾಂತಿ ನಡೆಯುತ್ತದೆ ಎಂದು ಹಲವು ನಾಯಕರು ಹೇಳಿಕೆಗಳನ್ನು ನೀಡುತ್ತಾ ಬರುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಚಿವ ಸಂಪುಟ ವಿಸ್ತರಣೆಯ ಕುರಿತು ಸಿಎಂ ಸಿದ್ದರಾಮಯ್ಯನವರು ಮಹತ್ವದ ಹೇಳಿಕೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ರಾಜಕಾರಣಕ್ಕೇ ಪಾದಾರ್ಪಣೆ ಮಾಡ್ತಾರ? ಎನ್ನುವ ಪ್ರಶ್ನೆಗೆ ಸಚಿವ ಜಿ.ಪರಮೇಶ್ವರ್‌ ಹೀಗೆ ಹೇಳಿದ್ದಾರೆ.

ರಾಜ್ಯ ರಾಜಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆಯವರು ಬಂದರೆ ಸ್ವಾಗತಾರ್ಹ. ಪಕ್ಷದ ಹೈಕಮಾಂಡ್‌ ನಿರ್ಧಾರಕ್ಕೆ ನಾವು ಸದಾ ಬದ್ಧರಾಗಿರುತ್ತೇವೆ.ಅದರಲ್ಲೂ ಝರ್ಗೆಯವರು ರಾಜಕಾರಣಕ್ಕೆ ಆಗಮಿಸಲು ಮನಸ್ಸು ಮಾಡಿದರೆ ಬರಲಿ.ಅವರು ದೊಡ್ಡ ನಾಯಕರು ಕರ್ನಾಟಕಕ್ಕೆ ಬರಲು ಇಚ್ಚಿಸಿದರೆ ಸ್ವಾಗತಿಸುತ್ತೆವೆ ಎಂದು ಗೃಹಮಂತ್ರಿಗಳು ಪ್ರತಿಕ್ರಿಯೆಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *