ಬೆಳಗಾವಿ: ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ಎರಡುವರೆ ವರ್ಷಗಳನ್ನು ಪೂರೈಸಿದೆ ಅದರ ನಡುವೆ ಸಿಎಂ ಸಿದ್ದರಾಮಯ್ಯನ ಪತ್ರ ತಮ್ಮ ತಂದೆಯ ರಾಜಕೀಯ ಜೀವನದ ಬಗ್ಗೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಬೆಳಗಾವಿಯ ಬಳಿಯ ಕಪ್ಪಲಗುದ್ದಿಯಲ್ಲಿ ಕನಕದಾಸರ ಪ್ರತಿಮೆಯಲ್ಲು ಲೋಕಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ನನ್ನ ತಂದೆಯ ರಾಜಕೀಯ ಜೀವನ ಕೊನೆಗಾಲದಲ್ಲಿ ನಡೆಯುತ್ತಿದೆ ಎಂದು ಸ್ಟೋಟಕ ಹೇಳಿಕೆಯನ್ನು ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮುಂದಿನ ತಿಂಗಳ ನವೆಂಬರ್‌ನಲ್ಲಿ ರಾಜಕೀಯ ಕ್ರಾಂತಿ ನಡೆಯುವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು ಎಂದು ಅಚ್ಚರಿಕೆಯ ಹೇಳಿಕೆಯನ್ನು ನೀಡುವುದರ ಮೂಲಕ ರಾಜಕೀಯ ನಾಯಕರ ಹುಬ್ಬೇರುವಂತೆ ಮಾಡಿದ್ದಾರೆ.
