ಚೆನೈ: ತಮಿಳು ನಟ ವಿಜಯ್ ಪಕ್ಷದ ಚಿಹ್ನೆಯಾದ ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಆಯೋಜಿಸಿರುವ ರಾಜಕೀಯ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿದ್ದು, 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಶನಿವಾರ ಅಂದರೆ ಸೆಪ್ಟೆಂಬರ್ 27ರಲ್ಲಿನಡೆದ ಕರೂರು ಕಾಲ್ತುಳಿತಕ್ಕೆ ಸಿಲುಕಿ 40 ಜನರು ಸಾವನ್ನಪ್ಪಿರುವ ಘಟನೆಯೂ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಈ ಘಟನೆಯಿಂದ ತಮ್ಮವರನ್ನು ಕಳೆದುಕೊಂಡ ಜನರ ಆಳಲು ಎಲ್ಲರ ಕಣ್ತುಂಬಿಸಿದೆ. ಕರೋರಿನ ಜನರಲ್ ಆಸ್ಪತ್ರೆಗೆ ತಮ್ಮ ಮಗುವಿನ ಶವವನ್ನು ಎತ್ತಿಕೊಂಡು ಓಡಿಬರುತ್ತಿರುವ ತಂದೆಯ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರ ಮನ ಕುಲುಕಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
