ಬೆಂಗಳೂರು:ಕೆ.ಎಚ್.ಮುನಿಯಪ್ಪ ಮುಖ್ಯಮಂತ್ರಿಯಾದರೆ ಸ್ವಾಗತ ಮಾಡುತ್ತೇನೆ ಎಂಬ ಹೇಳಿಕೆ ನೀಡುವುದರ ಮೂಲಕ ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಚಿವ ಕೆ.ಎಚ್.ಮುನಿಯಪ್ಪನವರು ಸಿಎಂ ಆದರೆ ಸ್ವಾಗತ. ಅವರು 7 ಬಾರಿ ಎಂಪಿ ಆಗಿದ್ದಾರೆ.ಎಂಪಿ ಆಗುವುದೆಂದರೆ ಸಾಮಾನ್ಯ ವಿಷಯವೇನಲ್ಲ. ಆದರೂ ಅವರನ್ನು 7 ಬಾರಿ ಎಂಪಿಯಾಗಿ ಆಯ್ಕೆ ಮಾಡಿದ್ದಾರೆ. ಸಿಎಂ ಸ್ಥಾನಕ್ಕೆ ಬೇಕಾಗಿರುವಂತಹ ಎಲ್ಲಾ ಅರ್ಹತೆಯಿದೆ.ಅವರು ಸಿಎಂ ಆದರೆ ಸಂತೋಷಪಡುತ್ತೇನೆಂದು ಹೇಳಿದ್ದಾರೆ.
ಮೇಲ್ಜಾತಿಯಿಂದ ತುಳಿತಕ್ಕೊಳಗಾದವರಿಗೆ ಅಧಿಕಾರ ಸಿಗಬೇಕು. ಅಂತಹ ವರ್ಗದ ಪರವಾಗಿರಬೇಕೆಂದು ಹೇಳಿದ್ದಾರೆ.
ರಾಜ್ಯ ರಾಜಕೀಯ ವಲಯದಲ್ಲಿ ಹಲವಾರು ಬದಲಾವಣೆಗಳಾಗುವ ಎಲ್ಲಾ ಸೂಚನೆಗಳು ಕಂಡುಬರುತ್ತಿದೆ.ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.
