ಬಿಗ್‌ಬಾಸ್‌ ಸೀಜನ್‌ 12 ರಲ್ಲಿ  ಏಳು-ಬೀಳು, ಸೋಲು-ಗೆಲುವು, ಹೀಗೆ ಪೇಕ್ಷಕರಿಗೆ ರಸದೌತಣ ನೀಡುವ ಶೋ ಎಂದರೆ ತಪ್ಪಾಗಲಾರದು. ಈ ಸೀಜನ್‌ನಲ್ಲಿ ಗಿಲ್ಲಿ ಮತ್ತು ಅಶ್ವಿನಿಗೌಡ ವಿಭಿನ್ನವಾಗಿ ಆಟವಾಡುತ್ತಿದ್ದಾರೆ. ಇವರಿಬ್ಬರ ಜಗಳದಲ್ಲಿ ಗಿಲ್ಲಿ ಪಾಪ ಎಂದುಕೊಂಡು ಗಿಲ್ಲಿಯ ಕಡೆ ಜನರು ಸಿಂಪತಿ ತೋರಿಸುತ್ತಿದ್ದರು.

ಬಿಗ್‌ಬಾಸ್‌ ಫಿನಾಲೆ ಸಮೀಪಿಸುತ್ತಿದ್ದು, ಸ್ಪರ್ಧಿಗಳ ನಡುವೆ ಜಿದ್ದಜಿದ್ದಿ ಕೂಡಾ ಶುರುವಾಗಿದೆ. ಹೀಗಿರುವಾಗ ಅಶ್ವಿನಿಗೌಡ ಟಾಸ್ಕ್‌ ಗೆದ್ದು ಗೇಮ್‌ ಚೇಂಜರ್‌ ಆದ್ರಾ ಎನ್ನುವ ಚರ್ಚೆಗಳು ನಡೆಯುತ್ತಿವೆ.ದೊಡ್ಮನೆಯಲ್ಲಿ ಒಂದು ಗೇಮ್‌, ಒಂದು ಟಾಸ್ಕ್‌ ಇಡೀ ಗೇಮನ್ನೇ ತಲೆಕೆಳಗು ಮಾಡ್ಬಹುದು ಎನ್ನುವುದಕ್ಕೆ ಅಶ್ವಿಗೌಡರವರ ಗೆಲುವು ಉದಾಹರಣೆಯಾಗಿದೆ.

ಬಗ್‌ಬಾಸ್‌ ಪ್ರಾರಂಭವಾದಾಗಿನಿಂದ ಅಶ್ವಿನಿಗೌಡ ಕಿರಿಕ್‌ ಮಾಡಿಕೊಂಡು ನೆಗಿಟಿವ್‌ ಆಗಿ ಕಾಣಿಸಿಕೊಂಡಿದ್ದರು.ಗಿಲ್ಲಿ-ಅಶ್ವಿನಿಗೌಡ ಜಗಳ ನೋಡುವುದೇ ಚೆಂದ. ಟಾಪ್‌ 6 ಟಾಸ್ಕಿನಲ್ಲಿ ಅಶ್ವಿನಿಗೌಡ ಗೆದ್ದಿರುವುದು ಎಲ್ಲರೂ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವ ಹಾಗೆ ಆಗಿದೆ. ಇಷ್ಟು ದಿನ ಅವರು ಮಾಡಿದ ಎಲ್ಲಾ ಕಿರಿಕ್‌ಗಳನ್ನು ಮರೆತು ಮನೆಮಂದಿ ಉತ್ತಮವನ್ನು ನೀಡಿ ಕಿಚ್ಚನ ಚಪ್ಪಾಳೆ ಅಶ್ವಿನಿಯವರಿಗೆ ಸಿಗಬೇಕೆಂದು ಬಯಸಿದ್ದಾರೆ.

ಕೊನೆಯಲ್ಲಿ ಗೇಮ್‌ ಚೇಂಜರ್‌ ಆಗಿ ಶೈನ್‌ ಆಗಿರುವ ಅಶ್ವಿನಿಗೌಡ ಮುಂದೆ ಗಿಲ್ಲಿ ಡಲ್‌ ಆಗಿರುವುದು ಅವರಿಗೆ ಅಡ್ವಾಂಟೇಜ್‌ ಆಯ್ತಾ ಎನ್ನುವ ಪ್ರಶ್ನೆ ಎಲ್ಲೋ ಒಂದು ಕಡೆ ಮನೆಮಾಡಿದೆ.

Leave a Reply

Your email address will not be published. Required fields are marked *