ಕಲಬುರ್ಗಿ: ಕುಡಿತ ಚಟವನ್ನು ದೂರ ಮಾಡಲು ನಾಟಿ ಔಷಧಿಯನ್ನು ಸೇವಿಸಿದ್ದ 3 ಜನರು ಸಾವನ್ನಪ್ಪಿದ್ದು, ಈ ಮತ್ತೆ ಒಬ್ಬ ವ್ಯಕ್ತಿ ಪ್ರಾಣವನ್ನು ತ್ಯಜಿಸಿರುವ ಘಟನೆಯು ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಇಮಡಾಪುರದಲ್ಲಿ ನಡೆದಿರುವುದು ತಿಳಿದುಬಂದಿದೆ.
ಮನೋಹರ್ (30) ಎಂಬುವವರು ಇಮಡಾಪುರದಲ್ಲಿ ಕುಡಿತ ಚಟ ಬಿಡುವ ನಾಟಿ ಔಷದಿಯನ್ನು ಸೇವಿಸಿ ಮೃತಪಟ್ಟವರ ಸಂಖ್ಯೆಯೂ 4ಕ್ಕೆ ಏರಿದೆ. ಈ ಔಷಧಿಯನ್ನು ತಾಯಪ್ಪ ಅಲಿಯಾಸ್ ಫಕೀರಪ್ಪ ಎಂಬುವವರು ನೀಡಿದ ನಾಟಿ ಔಷಧಿಯನ್ನು ಸೇವಿಸಿ ಸಾವನ್ನಪ್ಪಿದ್ದಾರೆ.
