ಬೆಂಗಳೂರು: ನಗರಗಳಲ್ಲಿ ಹೆಚ್ಚಿದ ರೇಬಿಸ್ ಪ್ರಕರಣದ ಪರಿಣಾಮ 17 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇತ್ತಿಚೆಗಿನ ದಿನಗಳಲ್ಲಿ ಬೀದಿ ನಾಯಿ, ಸಾಕಿರುವ ನಾಯಿಗಳ ಕಾಟದಿಂದ ಜನ ತತ್ತರಿಸಿ ಹೋಗಿದ್ದಾರೆ. ಅದರ ನಡುವೆ ನಾಯಿಗಳಿಂದ ಕಚ್ಚಿಸಿಕೊಂಡವರ ನಿರ್ಲಕ್ಷ್ಯದಿಂದ ಹಲವಾರು ಮಂದಿ ಮೃತಪಟ್ಟಿರುವುದು ಕೇಳಿಬರುತ್ತಿದೆ.
ಹೌದು ಎಲ್ಲೇಡೆಯಲ್ಲಿಯೂ ರೇಬಿಸ್ ಪ್ರಕರಣಗಳು ಕಂಡುಬರುತ್ತಿದ್ದು ಇದರಿಂದ ಸುಮಾರು ಜನರು ಸಾವನ್ನಪ್ಪಿದ್ದಾರೆ. ಆದ್ದರಿಂದ ರೇಬಿಸ್ ರೋಗದ ಲಕ್ಷಣಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ.
ಬೆಂಗಳೂರಿನಲ್ಲಿ 17 ಜನರು ರೇಬಿಸ್ ರೋಗದಿಂದ ಮೃತಪಟ್ಟಿರುವ ಮಾಹಿತಿಯು ಆರೋಗ್ಯ ಇಲಾಖೆ ಮಾಹಿತಿಯನ್ನು ನೀಡಿದೆ. ನಾಯಿ ಕಚ್ಚಿರುವ ಕೇಸ್‌ಗಳನ್ನು ತುಮಕೂರು ಜಿಲ್ಲೆಯು ಮುಂಚೂಣಿಯಲ್ಲಿದೆ.
ರೇಬಿಸ್ ರೋಗದ ಲಕ್ಷಣಗಳು ಹೀಗೆವೆ.
ಮೈ ಕೈ ನೋವು, ತಲೆನೋವು, ಸುಸ್ತಾಗುವುದು, ಸ್ನಾಯು ಒಡೆತ, ಕಣ್ಣೀರು ಹೆಚ್ಚು ಬರುವುದು, ಹೆಚ್ಚು ಶಬ್ದಕ್ಕೆ ಕಿರಿಕಿರಿ, ಮುಂತಾದ ಲಕ್ಷಣಗಳು ಕಂಡುಬಂದರೆ ಎಚ್ಚರಿಕೆ ವಹಿಸುವುದು ಉತ್ತಮ.
