ಬರಿದಾದ ಒಡಲು!
ಸುತ್ತಲೂ ಆವರಿಸಿದೆ ಸ್ಮಶಾಣದ ವಾತಾವರಣ
ಇಲ್ಲಿ ಹೆಣಗಳದ್ದೇ ವಾಸನೆ ತುಂಬಿದೆ.
ಆ ಹಿಮಾಲಯದ ತುತ್ತತುದಿಯಲ್ಲೂ ಕೂಡಾ
ಶವದ ಮೂಳೆಗಳು ಮಾರ್ಗದರ್ಶಕವಾಗಿವೆ ಗುರಿ ತಲುಪಲು!
ಶತಶತಮಾನಗಳ ಹಿಂದೆ ನಡೆದೋದ ಸಾವಿನ ಸೂತಕವಿನ್ನೂ
ಹಾಗೆ ಉಳಿದಿದೆ ತಮ್ಮ ಅವಶೇಷಗಳೊಂದಿಗೆ!
ಕೇವಲ ಹಿಮಾಲಯದ ತಪ್ಪಲಿನಲ್ಲದೇ ನಮ್ಮ ನಡುವೆ ನಮ್ಮವರೇ
ತಮ್ಮ ಉಳಿವಿಗಾಗಿ ಮಾಡಿದ ಹೋರಾಟದಲ್ಲಿ ಮಡಿದ ನಮ್ಮ ಪೂರ್ವಜರ
ಆಶಯಗಳು ಭೂತಾಯಿಯ ಮಡಿಲಿನಲ್ಲಿನ್ನೂ ಜೀವಂತವಾಗಿವೆ.
-ಜಗದಾಂಬ
