ಬೆಂಗಳೂರು: ನಮ್ಮಪಕ್ಷದಲ್ಲಾಗಲೀ, ನನ್ನ ಸಿದ್ದರಾಮಯ್ಯನ ನಡುವೆ ಭಿನ್ನಭಿಪ್ರಾಯಗಳಿಲ್ಲ.ನಾನಂತೂ ಗುಂಪುಗಾರಿಕೆಯನ್ನು ಯಾವತ್ತೂ ಮಾಡಿಲ್ಲ.ಮಾಡೋದು ಇಲ್ಲ.ನಮ್ಮಲ್ಲಿ ಒಗ್ಗಟ್ಟಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ನಾನು ದೆಹಲಿಗೆ ಹೋಗಿದ್ದೇ ನಿಜ.ಆದ್ರೆ ನಾನೂ ಯಾರನ್ನೂ ಕರೆದುಕೊಂಡು ಹೋಗಿಲ್ಲ, ಒಂದತ್ತು ಜನರನ್ನು ಕರೆದುಕೊಂಡು ಹೋಗಬಹುದಿತ್ತು ಆದ್ರೆ ನಾನೂ ಹಾಗೆ ಮಾಡಲಿಲ್ಲ ಎಂದಿದ್ದಾರೆ.

ನಾನು ಒಂದು ಸ್ಥಾನದಲ್ಲಿದ್ದೇನೆ. ಪಕ್ಷದ ಪ್ರೆಸಿಡೆಂಟ್‌ ಎಂದರೆ ಗಾಡ್ ಫಾದರ್‌ ಇದ್ದಂತೆ, ಆ ಸ್ಥಾನದಲ್ಲಿದ್ದವರು ಎಲ್ಲರನ್ನೂ ಸಮವಾಗಿ ನೋಡಬೇಕು.ನಾನು ಪಕ್ಷದವರ ವಿರುದ್ದವಾದ ಕಾರ್ಯಗಳನ್ನು ಎಂದಿಗೂ ಮಾಡುವುದಿಲ್ಲ. ನಾನು ನಿಷ್ಠೆಯಿಂದ ಕೆಲಸ ಮಾಡಿರುವುದು ನನ್ನ ಆತ್ಮಸಾಕ್ಷಿಗೆ ಗೊತ್ತಿದೆ ಹಾಗೆಯೇ ದೇವರಿಗೂ ತಿಳಿದಿದೆ ಎಂದು ಹೇಳಿದ್ದಾರೆ.‌

Leave a Reply

Your email address will not be published. Required fields are marked *