ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಹಲವಾರು ಕಲಾವಿದರು ನಮ್ಮನ್ನಗಲಿದ್ದಾರೆ. ಕನ್ನಡ ಚಿತ್ರರಸಿಕರನ್ನು ರಂಜಿಸಿದ ಹಾಸ್ಯ ಕಲಾವಿದ ಉಮೇಶ್‌ ಲಿವರ್‌ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ.

“ನನ್ನನ್ನು ಅಪಾರ್ಥ ಮಾಡ್ಕೋಬೇಡಿ ನೋಡಿ ನೋಡಿ ನನ್ನ ಅಪಾರ್ಥ ಮಾಡ್ಕೋಂಡಿದ್ದೀರಾ “ಎಂಬ ಡೈಲಾಗ್‌ ಹೇಳಿಕೊಂಡು ಪ್ರಸಿದ್ದರಾಗಿದ್ದ ಉಮೇಶ್‌350ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ್ದಾರೆ.

ನಮ್ಮನ್ನೆಲ್ಲಾ ಆಗಲಿದ ಉಮೇಶ್‌ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ  ಇರಿಸಲಾಗಿದ್ದು, ಚಿತ್ರರಂಗದವರು ಸಿಎಂ ಸಿದ್ದರಾಮಯ್ಯ ಇನ್ನಿತರು ಅಂತಿಮ ದರ್ಶನವನ್ನು ಪಡೆದುಕೊಂಡು ಕುಟುಂಬಸ್ಥರಿಗೆ ಸಾಂತ್ವನವನ್ನು ನೀಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *