ಜನಸಾಮಾನ್ಯರ ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಾದರೆ ಪಾಪ ಜನಸಾಮಾನ್ಯರು ಏನು ತಾನೇ ಮಾಡಿಯಾರು.
ಹೌದು ಟೊಮೊಟೊ ಬೆಲೆ ವಾರದಲ್ಲಿ ದಿಡೀರ್ ಎಂದು ಹೆಚ್ಚಾಗಿದ್ದನ್ನು ಕಂಡು ಜನರು ಶಾಕ್ ಆಗಿದ್ದಾರೆ.ಬೆಂಗಳೂರಿನಲ್ಲಿ 50 ರೂ ಗೆ 4 ಕೆ.ಜಿ ದೊರೆಯುತ್ತಿದ್ದ ಟೊಮೊಟೋ ಇದೀಗ ಸೆಂಚುರಿ ಬಾರಿಸಿದೆ. ಈಗೇ ದಿಡೀರ್ ಬದಲಾವನೆಗೆ ಕಾರಣಗಳೇನು ಎನ್ನುವುದನ್ನು ತಿಳಿಯೋಣ.

ಕಾಲ ಕಳೆದಂತೆ ಜನಸಂಖ್ಯೆಯು ಹೆಚ್ಚಾಗುತ್ತಿದ್ದು, ಎಲ್ಲರಿಗೂ ಪೂರೈಸುವಷ್ಟು ಟೊಮೊಟೊ ಸಿಗದಿದ್ದಕ್ಕಾಗಿ ರೇಟ್ ಜಾಸ್ತಿಯಾಗಿದೆ ಎಂದು ಅಂದಾಜಿಸಲಾಗಿದೆ.
ಸೀಜನ್ ಅಲ್ಲದೇ ಮಳೆ ಬೀಳುವ ಕಾರಣದಿಂದಲೂ ಇಳುವರಿ ಕಡಿಮೆಯಾಗಿ ಎನ್ನಬಹುದಾಗಿದೆ.

ಹೆಚ್ಚು ಹೆಚ್ಚು ಟೊಮೊಟೊವನ್ನು ಸಂಗ್ರಹಿಸಲು ಸರಿಯಾದ ವ್ಯವಸ್ಥೆಯಿಲ್ಲದೆ ಹಾಳಾಗಿರುತ್ತದೆ ಆದ್ದರಿಂದ ಮುಂದಿನ ದಿನಗಳಲ್ಲಿ ಟೊಮೊಟೊ ಬೆಲೆ ಮತ್ತಷ್ಟು ಹೆಚ್ಚಾಗುವ ಸಾದ್ಯತೆಯಿದೆ ಎನ್ನಲಾಗಿದೆ.
