ಗುಜರಾತ್:‌ ಅಪಾರ್ಟ್‌ ಮೆಂಟ್‌ನ ಲಿಪ್ಟಿನಲ್ಲಿ ಸಿಕ್ಕಿಹಾಕಿಕೊಂಡು 5 ವರ್ಷದ ಬಾಲಕ ಮೃತಪಟ್ಟಿರುವ ಘಟನೆಯು ಗುಜರಾತ್‌ನ ನವ್ಸಾರಿ ಜಿಲ್ಲೆಯ ವಿಜಲ್ಟುರ್‌ ಪ್ರದೇಶದಲ್ಲಿ ನಡೆದಿರುವುದು ತಿಳಿದುಬಂದಿದೆ.

ನೀರವ್‌ ಸ್ಕ್ಟೇರ್‌ ಅಪಾರ್ಟ್‌ಮೆಂಟ್‌ನಲ್ಲಿ 2ನೇ ಮಹಡಿಯಿಂದ ಹೋಗುವಾಗ ಬಾಲಕ ಸಿಲುಕಿಕೊಂಡಿದ್ದಾನೆ . ತಾಯಿ ಮನೆಗೆ ಲಾಕ್‌ ಹಾಕುವ  ವೇಳೆ ಬಾಲಕ ಲಿಪ್ಟ್‌ ಪ್ರವೇಶಿಸಿದ್ದ ಆ ಸಮಯದಲ್ಲಿ ಲಿಪ್ಟ್‌ ಆನ್‌ ಆಗಿದ್ದರಿಂದ ಬಾಲಕ ಸಿಕ್ಕಿಕೊಂಡಿದ್ದಾನೆ.ಲಿಪ್ಟ್‌ 2ನೇ ಮಹಡಿಗೆ ಇಳಿಯುವ ವೇಳೆ ಬಾಲಕನ ಅರ್ಧ ದೇಹವು ಲಿಪ್ಟಿನಲ್ಲಿ ಸಿಲುಕಿಕೊಂಡಿತ್ತು, ಈ ಘಟನೆ ನಡೆದ ಕೆಲವೇ ಕ್ಷಣದಲ್ಲಿ ಅಗ್ನಿಶಾಮಕ ಇಲಾಖೆಯು ಸ್ಥಳಕ್ಕೆಧಾವಿಸಿ ಸತತ 1 ಗಂಟೆಯ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ತಂಡದ ಸಿಬ್ಬಂದಿ ಲಿಪ್ಟ್‌ನ್ನು ಕಟ್ಟರ್‌ನ ಸಹಾಯದಿಂದ ಕತ್ತರಿಸಿ ಬಾಲಕನನ್ನು ಹೊರತೆಗೆದಿದ್ದಾರೆ.

Leave a Reply

Your email address will not be published. Required fields are marked *