ಬೆಂಗಳೂರು: ಶೋಭಾ ಕರಂದ್ಲಾಜೆ ಮತ್ತು ಸಚಿವ ಬೈರತಿಸುರೇಶ್ ನಡುವೆ ವಾದ ಪ್ರತಿವಾದ , ನಡೆದಿದ್ದು ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡಿಕೊಳ್ಳುತ್ತಿದ್ದು ವಾಕ್ಸಮರ ಹೆಚ್ಚಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನ ಪತ್ನಿ ಸಾವಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯ ಕೈವಾಡವಿರುವ ಅನುಮಾನವಿದೆ ಎಂದು ಸಚಿವ ಬೈರತಿ ಸುರೇಶ್ ಆರೋಪ ಮಾಡಿರುವುದಕ್ಕೆ ಶೋಭಾ ಕಂರಂದ್ಲಾಜೆ ತಿರುಗೇಟನ್ನು ನೀಡಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಸಚಿವ ಬೈರತಿಸುರೇಶ್‌ರವರು ಭಯಭೀತರಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಪುತ್ರನಾದ ರಾಕೇಶ್ ಸಾವಿಗೆ ಸಚಿವ ಬೈರತಿಸುರೇಶ್ ಕಾರಣ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ನಾನು ಈ ವಿಷಯದ ಬಗ್ಗೆ ಹೇಳ್ಬೇಕಾ? ಬೈರತಿ ಸುರೇಶ್ ತಮ್ಮ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡಿ, ಈ ರೀತಿಯ ಕೀಳುಮಟ್ಟದ ರಾಜಕಾರಣವನ್ನು ಮಾಡುವುದನ್ನು ಬಿಟ್ಟುಬಿಡಿ ಎಂದು ವಾಗ್ದಾಳಿ ನಡೆಸಿದ್ದಾರೆ.