ಬೆಂಗಳೂರು: ಸಚಿವ ಸಿಪಿ ಯೋಗೇಶ್ವರ್ ಕಾಂಗ್ರೆಸ್ಸಿನ ನಾಯಕರನ್ನು ಭೇಟಿ ಮಾಡಿದ್ದಾರೆ ಎಂಬ ಕುಮಾರಸ್ವಾಮಿಯವರ ಹೇಳಿಕೆಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ಕುಮಾರಸ್ವಾಮಿಯವರು ರಾಜಕಾರಣವನ್ನು ಅರೆದು ಕುಡಿದಿದ್ದಾರೆ.ಅವರ ವೈಯಕ್ತಿಕ ರಾಜಕಾರಣ ಒಂದಾದರೆ, ಪಕ್ಷದ ರಾಜಕಾರಣ ಒಂದು.ನನಗೂ ರಾಜಕೀಯದ ಬಗ್ಗೆ ಎಷ್ಟೋ ವಿಚಾರಗಳು ತಿಳಿದಿದೆ ಹಾಗಂತ ನಾನು ಸಲಹೆ ನೀಡಬಹುದು ಎಂದಿರುವ ಅವರು, ಅವರಲ್ಲಿ ಗೊಂದಲವಿರುವುದು ಗೊತ್ತಿರಲಿಲ್ಲ. ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ ಬಿಜೆಪಿಯವರಿಗೆ ಕೊಟ್ಟರೆ ಅವರ ಅಸ್ತಿತ್ವವಿರುವುದಿಲ್ಲವೆಂದು ತಿರುಗೇಟನ್ನು ನೀಡಿದ್ದಾರೆ.
ಬೆಂಗಳೂರಿನ ಸ್ವ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಪಿ ಯೋಗೇಶ್ವರ್ ಅವರಿಗೆ ಧ್ವಜಾರೋಹಣ ಮಾಡುವ ವೇಳೆಯಲ್ಲಿ ಅವರಿಗೆ ಕೊಡಬೇಕಾಗಿದ್ದ ಗೌರವವನ್ನು ನೀಡಲಾಯಿತು. ಅದನ್ನು ಬಿಟ್ರೆ ಬೇರೆನೂ ಇಲ್ಲ.ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ನಾನು ಸ್ಪರ್ದಿಸುತ್ತೇನೆ. ಆ ಕ್ಷೇತ್ರದಲ್ಲಿ ದಳದವರು ವೀಕ್ ಆಗಿದ್ದಾರೆ ಅಂದುಕೊಂಡರೆ ನನ್ನಷ್ಟು ಮೂರ್ಖ ಯಾರು ಇರುವುದಿಲ್ಲ.