ಬೆಂಗಳೂರು: ನಟಿ ರಮ್ಯಾಗೆ ಅಶ್ಲೀಲವಾಗಿ ಮೆಸೆಜ್‌ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಐಪಿ ಅಡ್ರೆಸ್ಸುಗಳ ಮುಖಾಂತರ ಆರೋಪಿಗಳನ್ನು ಪತ್ತೆ ಹಚ್ಚಿ, 5ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ. ಅದೇ ರೀತಿ ಐಪಿ ಅಡ್ರೆಸ್‌ ಮೂಲಕ ವಿಜಯಪುರದಲ್ಲಿರುವ ಮತ್ತೊಬ್ಬ ಆರೋಪಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ನಟಿಗೆ ಅಶ್ಲೀಲವಾಗಿ ಮೆಸೆಜ್‌ ಮಾಡಿರುವ  ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ವಿಜಯಪುರ ಮೂಲದ ಆರೋಪಿಯು ದರ್ಶನ್‌ ಅಭಿಮಾನಿ ಸಂತೋಷ್‌ ಎಂಬುವವನು “ನಮ್ಮ ಬಾಸ್‌ ತಂಟೆಗೆ ಬರಬೇಡ” ಎಂದು ಅಶ್ಲೀಲವಾಗಿ ಸಂದೇಶವನ್ನು  ತನ್ನ ಸಾಮಾಜಿಕ ಜಾಲಾತಾಣದ ಮೂಲಕ  ನಟಿ ರಮ್ಯಾಗೆ ಕಳುಹಿಸಿದ್ದಾನೆ ಅವನ ಐಪಿ ಅಡ್ರೆಸ್‌ನಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *