ಬೆಂಗಳೂರು: ಮತಗಳ್ಳತನದ ಆರೋಪ ಮಾಡಿರುವ ಚುನಾವಣಾ ಆಯೋಗ ಮತ್ತು ಬಿಜೆಪಿಯ ವಿರುದ್ದ ರಾಹುಲ್‌ ಗಾಂಧಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿಯೇ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ನಮ್ಮ ಮತ, ನಮ್ಮ ಹಕ್ಕು ಹೋರಾಟದಲ್ಲಿ ರಾಹುಲ್‌ ಗಾಂಧಿ ಮತಗಳ್ಳತನದ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ.

ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಡಿಕೆಶಿವಕುಮಾರ್‌ , ಸಂವಿಧಾನ ನೀಡಿರುವ ನಮ್ಮ ಮತದ ಹಕ್ಕನ್ನು ಉಳಿಸಬೇಕು ಎಂದು ರಾಹುಲ್‌ ಗಾಂಧಿಯವರು ಹೇಳಿದ್ದಾರೆ ಅದರಂತೆಯೇ ಕರ್ನಾಟಕದಲ್ಲಿರುವ ಪ್ರತಿಯೊಂದು ಮತಕ್ಷೇತ್ರದಲ್ಲಿಯೂ ಲೀಗಲ್‌ ಬ್ಯಾಂಕ್‌ ಆರಂಭಿಸುತ್ತೇವೆ, ಆಸ್ಪತ್ರೆಗಳಲ್ಲಿ ಬ್ಲಂಡ್‌ ಬ್ಯಾಂಕ್‌ಗಳಿರುವಂತೆ ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವವನ್ನು ಕಾಪಾಡಲು ಪ್ರತಿ ಕ್ಷೇತ್ರದಲ್ಲಿಲೀಗಲ್‌ ಬ್ಯಾಂಕ್‌ ಸ್ಥಾಪನೆಯಾಗಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *