ಬೆಂಗಳೂರು: ರಾಜ್ಯದಲ್ಲಿ ಒಳಮೀಸಲಾತಿಯ ಪ್ರಕ್ರಿಯೆ ಮುಗಿದ ನಂತರ ಸರ್ಕಾರಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಸದನದ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‌ನ ಭೋಜೇಗೌಡರವರ ಪ್ರಶ್ನೆಗೆ ಉತ್ತರಿಸಿದ ಇವರು, ಗೌವರ್ನಮೆಂಟ್‌ ಸ್ಕೂಲುಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯಿರುವುದರಿಂದ 6ನೇ ತರಗತಿಯಿಂದ 10ನೇ ತರಗತಿಯವರೆಗೆ ದೈಹಿಕ ಶಿಕ್ಷಣದ ವಿಷಯವನ್ನು ಸೇರಿಸಬೇಕೆಂದು 2006-07ರಲ್ಲಿ ವರದಿಯನ್ನು ಸರ್ಕಾರ ಒಪ್ಪಿತ್ತು.80% ಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲ. ಪಿಟಿ ಟಚರಿಲ್ಲದೇ ಫಿಟ್‌ ಇಂಡಿಯಾ, ಖೇಲೋ ಇಂಡಿಯಾ ಹೇಗಾಗುತ್ತದೆ ಆದ್ದರಿಂದ ದೈಹಿಕ ಶಿಕ್ಷಕರನ್ನು ನೇಮಕ ಮಾಡಿ ಎಂದು ಒತ್ತಾಯಿಸಲಾಯಿತು.

ಈ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ, ದೈಹಿಕ ಶಿಕ್ಷಕರ ಕೊರತೆಯಿರುವುದು ಸತ್ಯ.ಮುಂಬರುವ ಶಿಕ್ಷಕರ ನೇಮಕಾತಿಯಲ್ಲಿ ದೈಹಿಕ ಶಿಕ್ಷಕರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ.ಒಳಮೀಸಲಾತಿಯ ಪ್ರಕ್ರಿಯೆ ಮುಗಿದ ಕೂಡಲೇ ದೈಹಿಕ ಶಿಕ್ಷಕರ ನೇಮಕಾತಿ ಮಾಡುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *