ನವದೆಹಲಿ: ವಿಕಲಚೇತನರನ್ನು, ಅಂಗವಿಕಲರನ್ನಿಟ್ಟುಕೊಂಡು ಹಾಸ್ಯ ಮಾಡುವವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಕ್ಷಮೆಯಾಚಿಸಬೇಕೆಂದು ಆದೇಶವನ್ನು ನೀಡಿದೆ.
ಹೌದು ಅಂಗವಿಕಲರನ್ನಿಟ್ಟುಕೊಂಡು ಹಾಸ್ಯ ಮಾಡುವ ಸ್ಟಾಂಡ್ ಆಪ್ ಕಾಮಿಡಿಯನ್‌ಗಳನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಇಷ್ಟು ಕೀಳುಮಟ್ಟದ ಹಾಸ್ಯ ಮಾಡಿದ ನೀವುಗಳು ಸಾಮಾಜಿಕ ಜಾಲಾತಾಣದಲ್ಲಿ ಬಹಿರಂಗವಾಗಿ ಕ್ಷಮೆಯನ್ನು ಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ನೀಡಿದೆ.
ಅಂಗವಿಕಲರ ಹಕ್ಕು ರಕ್ಷಣೆಯ ಎಸ್‌ಎಂಎ ಕ್ಯೂರ್ ಫೌಂಡೇಶನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ಈ ಆದೇಶವನ್ನು ಹೊರಡಿಸಿದ್ದ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜೋಯ್ಮಲ್ಯ ಬಾಗ್ಚಿಯವರ ಪೀಠವು ಹಾಸ್ಯ ಕಲಾವಿದರಾದ ವಿಪುಲ್ ಗೋಯಲ್,ಸಮಯ್‌ರೈನಾ, ,ಬಲರಾಜ್ ಪರಮಜೀತ್‌ಸಿಂಗ್ ಘಾಯ್, ಮುಂತಾದವರಿಗೆ ದಂಡವನ್ನು ವಿಧಿಸಿ ಎಚ್ಚರಿಕೆಯನ್ನು ನೀಡಿದೆ.
ನೀವೆಲ್ಲರೂ ಕೋರ್ಟ್ ಮುಂದೆ ಕ್ಷಮೆಯಾಚಿಸಿದ್ದೀರಿ ಅದೇ ರೀತಿ ಸಾಮಾಜಿಕ ಜಾಲಾತಾಣದಲ್ಲಿ ಕ್ಷಮೆಯಾಚಿಸಬೇಕೆಂದು ನ್ಯಾಯಾಲಯ ತಿಳಿಸಿದೆ.ದಂಡವನ್ನು ವಿಧಿಸುವ ವಿಚಾರದ ಕುರಿತು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದೆಂದು ತಿಳಿಸಿದೆ.
ಹಾಸ್ಯ ಎನ್ನುವುದು ನಮ್ಮ ಜೀವನಕ್ಕೆ ಅತ್ಯಗತ್ಯವಾಗಿದ್ದರೂ, ಬೇರೆಯವರನ್ನು ನೋಡಿ ನಗುವುದು, ಮತ್ತು ಬೇರೆಯವರೊಂದಿಗೆ ನಗುವುದರ ನಡುವೆ ಬಹಳ ವ್ಯತ್ಯಾಸವಿದೆಯೆಂದು ಪೀಠ ತಿಳಿಸಿದೆ.
