ಬೆಂಗಳೂರು: ಗಣೇಶ ವಿಸರ್ಜನೆ ಮಾಡುವ ಸಮಯದಲ್ಲಿ ನಡೆದಿರುವ ಘಟನೆ ಮತ್ತೆ ನಡೆಯದಂತೆ ಕ್ರಮ ಕೈಗೊಳ್ಳಲು ನಗರದ ಪೊಲೀಸ್‌ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಯಿತು. ಆ ಸಂದರ್ಭದಲ್ಲಿ ಗಣೇಶೋತ್ಸವಕ್ಕೆ ಬಲವಂತವಾಗಿ ಹಣ ವಸೂಲಿ ಮಾಡಿದರೆ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಕಮಿಷನರ್‌ ಎಚ್ಚರಿಕೆಯನ್ನು ನೀಡಿದ್ದಾರೆ.

ಗಣೇಶನನ್ನು ಪೂಜಿಸಿ ವಿಸರ್ಜನೆ ಮಾಡುವ ಸಮಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಜರಿಗಿಸಲು ಡಿಸಿಪಿ ಮತ್ತು ಎಸಿಪಿಗಳ ಜೊತೆ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯನ್ನುದ್ದೇಶಸಿ ಮಾತನಾಡಿದ ಕಮಿಷನರ್‌ ಸೀಮಂತ್‌ ಸಿಂಗ್ ಎಲ್ಲಾ ಡಿಸಿಪಿ ಮತ್ತು ಎಸಿಪಿಗಳ ಜೊತೆ ಸಭೆಯನ್ನು ನಡೆಸಿದ್ದೇನೆ. ನಿಯಮಗಳು ಉಲ್ಲಂಘನೆಯಾದ್ರೆ ಕ್ರಮ ಜರುವಿಸಲಾಗುತ್ತದೆ ಎಂದು ಹೇಳಿದ್ದಾರೆ.

ವಾಹನ ಸವಾರರನ್ನು, ಸಾರ್ವಜನಿಕರ ಹತ್ತಿರ ಬಲವಂತವಾಗಿ ಚಂದಾ ವಸೂಲಿ ಮಾಡಿದರೆ ಪ್ರಕರಣವನ್ನು ದಾಖಲಿಸಲಾಗುತ್ತದೆ.ಇಲ್ಲಿಯವರೆಗೂ ಆ ರೀತಿಯ ದೂರುಗಳು ಕಂಡುಬಂದಿಲ್ಲ.ಭದ್ರತೆಯ ವಿಚಾರದಲ್ಲಿ ಸಿಬ್ಬಂದಿಗಳಿಗೂ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಕಮಿಷನರ್‌ ಹೇಳಿದ್ದಾರೆ.

Leave a Reply

Your email address will not be published. Required fields are marked *