ಬೆಂಗಳೂರು: ಪಿಜಿಯಲ್ಲಿ ತಿಗಣೆ ಔಷಧ ಸಿಂಪಡಿಸಿದ ಕಾರಣ ಬಿ.ಟೆಕ್ ಓದುತ್ತಿದ್ದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಗರದ ಹೆಚ್.ಎ.ಎಲ್ ಬಳಿ ನಡೆದಿದೆ ಎಂದು ತಿಳಿದುಬಂದಿದೆ.
ಹೆಚ್.ಎ.ಎಲ್ ಬಳಿ ಯಲ್ಲಿರುವ ಪಿಜಿಯಲ್ಲಿದ್ದ ತಿರುಪತಿ ಮೂಲದ ಪವನ್ ಎಂಬ ವಿದ್ಯಾರ್ಥಿಯು ತಿಗಣೆ ಔಷಧ ಸಿಂಪಡಣೆ ಮಾಡಿರುವುದು ತಿಳಿಯದೆ ರೂಮಿಗೆ ಹೋಗಿರುವ ಕಾರಣ ಸಾವನಪ್ಪಿರುವ ಘಟನೆಯ ಬೆಂಗಳೂರಿನ ಹೆಚ್.ಎ.ಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ತಿಗಣೆ ಔಷಧದ ಕಾರಣ ವಿದ್ಯಾರ್ಥಿ ಅಸ್ವಸ್ಥನಾಗಿ ಸಾವನ್ನಪ್ಪಿರುವ ಶಂಕೆ ಬಂದಿದ್ದು,ಘಟನೆ ನಡೆದಿರುವ ಸ್ಥಳಕೆ ಧಾವಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದು, ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ.
