ಬೆಂಗಳೂರು: ಮಿಸ್ಸಿಂಗ್ ಆದವರನ್ನು ಹುಡುಕದೇ ಕೇಸನ್ನು ಖುಲಾಸೆಗೊಳಿಸಿದ ಪೊಲೀಸರಿಗೆ ಹೈಕೋರ್ಟ್ ನೋಟಿಸ್ ನೀಡಿದೆ.
ಹೌದು ನಾಪತ್ತೆಯಾದವರನ್ನು ಹುಡುಕದೆ ಕೇಸನ್ನು ಕ್ಲೋಸ್ ಮಾಡಿರುವುದಕ್ಕೆ ಹೈಕೋರ್ಟ್ ವಿವರಣೆಯನ್ನು ಕೇಳಿದೆ.ಇದನ್ನು ಪ್ರಶ್ನಿಸಿ ಹೈಕೋರ್ಟ್ ನೋಡಿಸ್ ನೀಡಿದೆ.
ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಪ್ರತಿ 1 ನಿಮಿಷಕ್ಕೆ ಒಬ್ರು ಎಂಬಂತೆ ಕಾಣೆಯಗುತ್ತಿದ್ದಾರೆ. ಕಾಣೆಯಾದವರನ್ನು ಹುಡುಕದೆ ಪೊಲೀಸರು ಕೇಸನ್ನು ಮುಚ್ಚಿಹಾಕಿದ್ದಾರೆ.ನ್ಯಾ.ಸೂರಜ್ ಗೋವಿಂದರಾಜ್‌ರವರ ಪೀಠ ಪ್ರಶ್ನೆ ಮಾಡಿದೆ.
ಬೆಂಗಳೂರಿನ ಕುಮಾರ್ ಎಂಬುವವರು ನಾಪತೆಯಾಗಿದ್ದರೆ ಎಂದು ಮಹೇಶ್ ಎಂಬುವವರು ದೂರನ್ನು ನೀಡಿದ್ದರು.ಕುಮಾರ್‌ನನ್ನು ಹುಡುಕದೆ ಕೇಸನ್ನು ಕ್ಲೋಸ್ ಮಾಡಿರುವ ಕಾರಣ ಮಹೇಶ್ ಹೈಕೋರ್ಟ್ ಮೊರೆ ಹೋಗಿದ್ದರು.ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್ ಸರ್ಕಾರ ಮತು ಪೊಲೀಸ್ ಇಲಾಖೆಗೆ ವಿವರಣೆಯನ್ನು ಕೇಳಿದೆ ಎನ್ನಲಾಗಿದೆ.
