ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್‌ರವರಿಗೆ ಬೆನ್ನುನೋವು ಹೆಚ್ಚಾಗಿದ್ದು, ಹಾಸಿಗೆ ದಿಂಬಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು.ಅರ್ಜಿಯನ್ನು ಪರಿಶೀಲಿಸಿದ ನಂತರ ಜೈಲಿನಲ್ಲಿಯೇ ಚಿಕಿತ್ಸೆಯನ್ನು ನೀಡಲು ಸೂಚನೆಯನ್ನು ನೀಡಲಾಗಿತ್ತು. ಅಂತೆಯೇ ಜೈಲಿನಲ್ಲಿಯೇ ತಜ್ಞರು ಫಿಸಿಯೋಥೆರಪಿಯನ್ನು ಮಾಡಿದ್ದಾರೆ.
ಸುರ್ಪೀಂ ಕೋರ್ಟ್ ದಾಸನ ಬೇಲ್ ಕ್ಯಾನ್ಸಲ್ ಮಾಡಿದೆ. ಬೆನ್ನು ನೋವಿಗೆ ಕಾರಣ ಜೈಲಿನಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆಯನ್ನು ಮಾಡಿದ್ದು, CVರಾಮನ್ ಆಸ್ಪತ್ರೆಯ ವೈದ್ಯರಿಂದ ತಪಾಸಣೆ ನಡೆಯುತ್ತಿದೆ.

ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಮತ್ತೊಮ್ಮೆ ಹಾಸಿಗೆ ಮತ್ತು ದಿಂಬಿಗೆ ಇತ್ತೀಚೆಗೆ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಾಧೀಶರೇ ದಯಮಾಡಿ ಜೈಲಿಗೆ ಖುದ್ದು ನೀವೇ ಒಮ್ಮೆ ಭೇಟಿ ನೀಡಿ ಪರಿಶೀಲಿಸುವಂತೆ ಕೋರಿಕೊಂಡಿದ್ದರು. ದರ್ಶನ್ ಸಲ್ಲಿಸಿರುವ ಅರ್ಜಿಯು ಸ್ವೀಕಾರವಾಗಿದ್ದು, ಜೈಲಿಗೆ ಭೇಟಿ ನೀಡಿ ಪರಿಶೀಲನೆಯನ್ನು ಮಾಡುವಂತೆ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗೆ ಜಡ್ಜ್ ಸೂಚಿಸಿದ್ದಾರೆ. ಜೈಲಿನಲ್ಲಿ ನಿಯಮ ಪಾಲನೆ ಆಗ್ತಿದೆಯೋ, ಅಥವಾ ಇಲ್ಲವೋ ಎನ್ನುವುದನ್ನು ಸರಿಯಾಗಿ ಪರಿಶೀಲನೆ ನಡೆಸಿ ಅಕ್ಟೋಬರ್.18ರೊಳಗೆ ವರದಿಯನ್ನು ನೀಡುವಂತೆ ತಿಳಿದ್ದಾರೆ. ಈ ವರದಿಯನ್ನು ಸಲ್ಲಿಕೆ ಮಾಡಿದ ನಂತರ ಅದನ್ನು ಪರಿಶೀಲಿಸಿ, ದರ್ಶನ್ ಗೆ ಅಗತ್ಯವಾಗಿರುವ ಸೌಕರ್ಯವನ್ನಯ ನೀಡಲಾಗ್ತಿದೆಯೋ? ಇಲ್ಲವೋ? ಎಂಬುದನ್ನು ತಿಳಿದುಕೊಂಡು ಮುಂದಿನ ತೀರ್ಪನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ವರದಿಯನ್ನು ಪರಿಶೀಲಿಸಿದ ನಂತರ ನಟ ದರ್ಶನ್‌ಗೆ ಹಾಸಿಗೆ ಮತ್ತು ದಿಂಬು ಸಿಗುತ್ತದೆಯೋ? ಇಲ್ಲವೋ? ಎಂಬುದನ್ನು ಕಾದು ನೋಡಬೇಕಿದೆ.
