ಬೆಂಗಳೂರು: ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ನಮ್ಮನ್ನಗಲಿ 4 ವರ್ಷಗಳು ಕಳೆದಿವೆ.ಅಪ್ಪು ಸ್ಮರಣೆಯ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ರಾಜ್‌ ಕುಟುಂಬದವರು ರಾಜ್‌ಕುಮಾರ್‌ ಸಮಾಧಿಗೆ ಪೂಜೆಯನ್ನು ಸಲ್ಲಿಸಿದ್ದಾರೆ.

ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ನಟ ಶಿವಣ್ಣ  ಪುನೀತ್‌ ನಮ್ಮನ್ನಗಲಿ 4 ವರ್ಷ ಕಳೆದಿವೆ.ಅಪ್ಪು ನಮ್ಮ ಹತ್ತಿರ ಇಲ್ಲ ಎನ್ನುವುದನ್ನು ಕಲ್ಪನೆ ಮಾಡಿಕೊಳ್ಳಲಾಗುವುದಿಲ್ಲ. ಅವನ ನೆನಪು ಸದಾ ನಮ್ಮ ಮನಸ್ಸಲ್ಲಿರುತ್ತದೆ.

ಅಪ್ಪು ಇಲ್ಲ ಎಂಬುದನ್ನು ನೆನಪು ಮಾಡಿಕೊಂಡರೆ ಮನಸ್ಸಿಗೆ ತುಂಬಾ ಕಷ್ಟ ಆಗುತ್ತದೆ.ಅಪ್ಪು ನೆನಪಿನಲ್ಲಿ ನಾವು ಬಾಳುತಿದ್ದೇವೆ.ಅಪ್ಪು ನಮ್ಮ ಜೊತೆ ಇದ್ದಾನೆ ಎಂದುಕೊಂಡೇ ಇದ್ದೇವೆ. AI ಮೂಲಕ ಶಿವಣ್ಣ ಮತ್ತು ಪುನೀತ್‌ ರಾಜ್‌ಕುಮಾರ್‌ ನಟನೆಯ ಸಿನಿಮಾವನ್ನು ಮಾಡಬೇಕೆಂದು ಪ್ಲಾನ್‌ ಮಾಡುತ್ತಿದ್ದೇವೆ. AI ಮೂಲಕ ಮಾಡುವುದರಿಂದ ಚೆನ್ನಾಗಿ ಬಂದರೆ ಸಿನಿಮಾ ಖಂಡಿತವಾಗಿ ಮಾಡುತ್ತೇವೆ ಎಂದಿದ್ದಾರೆ.

Leave a Reply

Your email address will not be published. Required fields are marked *