ಬೆಂಗಳೂರಿನಲ್ಲಿರುವ ಡಿಕೆಶಿವಕುಮಾರ್ ಅವರ ನಿವಾಸಕ್ಕೆ ಆಗಮಿಸಿದ ತೇಜಸ್ವಿ ಸೂರ್ಯ , ಡಿಸಿಎಂ ಡಿಕೆಶಿವಕುಮಾರ್‌ರವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.ಸುರಂಗ ರಸ್ತೆ ನಿರ್ಮಾಣದ ಆಗುಹೋಗುಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಸುರಂಗ ರಸ್ತೆಯಿಂದಾಗುವ ಸಮಸ್ಯೆಗಳ ಬಗೆ ವಿವರಿಸಿದ್ದಾರೆ.
ನಗರದಲ್ಲಿ ಸಂಚಾರ ದಟ್ಟಣೆಯ ನಿಯಂತ್ರಣದ ಸಲುವಾಗಿ ರಾಜ್ಯ ಸರ್ಕಾರವು ಸುರಂಗ ರಸ್ತೆಯನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ.ಇದನ್ನು ವಿರೋಧಿಸಿ ತೇಜಸ್ವಿ ಸೂರ್ಯ ನ್ಯಾಯಾಲಯದ ಮೋರೆ ಹೋಗಿದ್ದಾರೆ. ಆ ವಿಚಾರಕ್ಕ ಎಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ.
