ಬೆಂಗಳೂರು: ಕಬ್ಬು ಬೆಳೆಗಾರರಿಗೆ ಬಿಜೆಪಿ ಪಕ್ಷದವರು ಕೊಡುವುದಕ್ಕಿಂತ ಹೆಚ್ಚಿನ ದರವನ್ನು ನಾವು ನಿಗದಿ ಮಾಡುತ್ತೇವೆ ಎಂದು ಸದ ಡಿಕೆ ಸುರೇಶ್ ತಿಳಿಸಿದ್ದಾರೆ.
ಕಬ್ಬು ಬೆಳೆಗಾರರಿಗೆ ತಮ್ಮ ಬೆಳೆಯ ದರವನ್ನು ಹೆಚ್ಚಿಸಲು ಬೆಳಗಾವಿಯಲ್ಲಿ ರೈತರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.ಈ ವಿಚಾರದ ಕುರಿತು ಮಾತನಾಡಿರುವ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡುವ ಸಮಯದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳು ನಿಗದಿ ಮಾಡಿರುವುದಕ್ಕಿಂತಲೂಹೆಚ್ಚಿನ ದರವನ್ನು ನಮ್ಮ ರಾಜ್ಯ ಸರ್ಕಾರ ನೀಡುತ್ತದೆ ಎಂದು ಹೇಳಿದ್ದಾರೆ.
ಸಿಎಂ ಯಾರಾಗ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ಮತ್ತು ಪಕ್ಷದವರ ನಿರ್ಧಾರದಂತೆ ಅವರು ಯಾರಿಗೆ ಹೇಳ್ತಾರೋ ಅವರು ಸಿಎಂ ಸ್ಥಾನವನ್ನು ಅಲಂಕರಿಸುತ್ತಾರೆ ಎಂದು ಹೇಳಿದ್ದಾರೆ.
