ಹೊಸ ವರ್ಷಾಚರಣೆಯ ಸಂಭ್ರಮವನ್ನು ಅಚರಿಸಲು ಜನ ಕಾತುರದಿಂದ ಕಾಯುತ್ತಿದ್ದಾರೆ.ಮುಂಜಾಗ್ರತ ಕ್ರಮವಾಗಿ ಎಂ.ಜಿ.ರಸ್ತೆಮತ್ತು ಬ್ರಿಗೇಡ್‌ ರಸ್ತೆಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ರಸ್ತೆಗಳ ಮೇಲಿನ ವಾಹನ ಸವಾರರ ಕಣ್ಗಾವಲಿಗೆ ಸಿಸಿಟಿವಿ ನಿಯಂತ್ರಣ ರೂಮುಗಳನ್ನು ತೆರೆಯಲಾಗಿದ್ದು, ಹೆಚ್ಚು ಕ್ಯಾಮಾರಾಗಳನ್ನು ಹಾಕಲಾಗಿದೆ. ಇದು ಮಾತ್ರವಲ್ಲದೆ, ಎಐ ಕ್ಯಾಮರಾ ಬಳಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.

ಹೊಸ ವರ್ಷಾಚರಣೆಯ ಸಮಯದಲ್ಲಿ ಸ್ವಲ್ಪವೂ ಗಲಾಟೆ-ಗಲಬೆಗಳು ಸಂಭವಿಸಕೂಡದು ಎಂದು ಈ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮತ್ತು ಹೆಚ್ಚಿನ ಸುರಕ್ಷತೆಗಾಗಿ 14 ಸಾವಿರ ಪೊಲೀಸರು, ಎರಡೂವರೆ ಸಾವಿರ ಟ್ರಾಫಿಕ್‌ ಪೊಲೀಸರು, 21 ಸಿಎಆರ್‌, 88 ಕೆಎಸ್‌ಆರ್‌ಪಿ ತುಕಡಿಗಳು, 266 ಹೊಯ್ಸಳ ವಾಹನಗಳನ್ನು ನೇಮಿಸಲಾಗಿದ್ದು, ಜನದಟ್ಟಣೆಯನ್ನು ನಿಯಂತ್ರಿಸಲು 20 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *