ಬೆಂಗಳೂರು: ಹೊಸ ವರ್ಷಾಚರಣೆಯ ಸಮಯಯದಲ್ಲಿ ಕುಡಿದು ತೂರಾಡುವವರನ್ನೆಲ್ಲಾ ಮನೆಗಳಿಗೆ ಪೊಲೀಸರೇ ಬಿಡ್ಡು ಬರ್ತಾರೆ ಎನ್ನುವ ವಿಚಾರ ಚರ್ಚೆಯಾಗುತ್ತಿದ್ದು, ಈ ಗೊಂದಲಗಳಿಗೆಲ್ಲಾ ಸ್ವತಃ ನಗರದ ಪೊಲೀಸ್‌ ಆಯುಕ್ತ ಸೀಮಂತ್‌ ಸಿಂಗ್‌ ಸ್ಪಷ್ಟನೆಯನ್ನು ನೀಡಿದ್ದಾರೆ.

ಈ ವಿಚಾರದ ಕುರಿತು ಮಾತನಾಡಿದ ಅವರು, ಕುಡಿದು ತೂರಾಡುವವರನ್ನು ಮನೆಗೆ ಬಿಡುವುದಿಲ್ಲ, ಯಾರಿಗಾದರೂ ತುರ್ತು ಸಹಾಯ ಬೇಕು ಎಂದಾಗ ಕಂಡಿತವಾಗಿ ಪೊಲೀಸರು ಸಹಾಯ ಹಸ್ತ ನೀಡ್ತಾರೆ, ಅದನ್ನು ಬಿಟ್ಟು ಕುಡಿದವರನ್ನು ಮನೆ ಮನೆಗಳಿಗೆ ಬಿಡುವುದು ಪೊಲೀಸರ ಕೆಲಸವಲ್ಲ.ಸಮಸ್ಯೆಗಳಾದಾಗ ಕಂಡಿತವಾಗಿ ಸಹಾಯಕ್ಕೆ ಬರುತ್ತೇವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *