ಬೆಂಗಳೂರು: ಯಲಹಂಕ ಸಮೀಪದ ಕೋಗಿಲು ಲೇಔಟ್‌ನಲ್ಲಿ ಅಕ್ರಮ ಮನೆಗಳ ತೆರವು ಹಿನ್ನೆಲೆಯಲ್ಲಿ ನಿರಾಶ್ರಿತರಿಗೆ ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು,  ನಿರಾಶ್ರಿತರಿಗೆ ನಾಳೆಯೇ ಜಿಬಿಎ,ಮತ್ತು ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆಗಳನ್ನು ವಿತರಣೆ ಮಾಡಲಿದೆ ಎಂದು ತಿಳಿದುಬಂದಿದೆ.

ಈ ವಿಚಾರದ ಕುರಿತು ಮಾತನಾಡಿದ ನಗರಾಭಿವೃದ್ದಿ ಇಲಾಖೆಯ ಸಚಿವರಾದ ಭೈರತಿ ಸುರೇಶ್, ಸ್ಥಳೀಯರು ಯಾರಿಗೆ ಹೆಚ್ಚು ಅವಶ್ಯಕತೆಯಿರುತ್ತದೆಯೋ ಮತ್ತು ಯಾರು ಅರ್ಹರಾಗಿರ್ತಾರೆ ಅಂತಹವರಿಗೆ ಮಾತ್ರ ಮನೆಯನ್ನು ನೀಡುತ್ತೇವೆ. ಈಗಾಗಲೇ ಸ್ಥಳವನ್ನು ಪರಶೀಲನೆ ಮಾಡಲಾಗಿದ್ದು, ಪರಿಶೀಲನೆ ವೇಳೆಯಲ್ಲಿ 90 ಜನರು ಮಾತ್ರವೇ ಸ್ಥಳೀಯರಿದ್ದಾರೆ ಎಂಬ ಮಾಹಿತಿಯು ನಮಗೆ ಲಭ್ಯವಾಗಿದೆ. ಈ 90 ಸ್ಥಳೀಯ ಫಲಾನುಭವಿಗಳಿಗೆ ಮಾತ್ರವೇ ವಸತಿಯನ್ನುನೀಡಲಾಗುತ್ತದೆ  ಎಂದು  ತಿಳಿಸಿದ್ದಾರೆ.

Leave a Reply

Your email address will not be published. Required fields are marked *